Friday, February 3, 2023

Latest Posts

ಪಾಕ್ ಸೇನೆ ಮೇಲೆ ದಾಳಿ ನಡೆಸಿದ ತಾಲಿಬಾನ್: ಒಂಬತ್ತು ಸೈನಿಕರು ಒತ್ತೆಯಾಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸೇನೆಯ ಮೇಲೆ ದಾಳಿ ನಡೆಸಿ ಒಂಬತ್ತು ಸೈನಿಕರನ್ನು ತಾಲಿಬಾನ್ ಒತ್ತೆಯಾಳಾಗಿ ಇರಿಸಿಕೊಂಡಿದೆ.
ಇಸ್ಲಾಮಾಬಾದ್‌ನ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ತೆಹ್ರೀಕ್-ಎಲ ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದನಾ ನಿಗ್ರಹ ಇಲಾಖೆಯನ್ನು ಗುರಿಯಾಗಿಸಿದೆ.

ಬನ್ನು ಕಂಟೋನ್ಮೆಂಟ್‌ನಲ್ಲಿ ನಡೆದ ದಾಳಿಯಲ್ಲಿ ಹಲವು ಪಾಕ್ ಸೈನಿಕರು ಮತ್ತು ಸಿಟಿಡಿ ಸದಸ್ಯರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ತಾಲಿಬಾನ್ ಅನೇಕ ಸೈನಿಕರನ್ನು ಒತ್ತಯಾಳನ್ನಾಗಿ ಮಾಡಿಕೊಂಡಿದೆ. ಒಂಬತ್ತು ಯೋಧರು ಒತ್ತೆಯಾಳುಗಳಾಗಿದ್ದಾರೆ ಈ ಬಗ್ಗೆ ಭಯೋತ್ಪಾದಕರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇಡೀ ಕಟ್ಟಡವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಗೋಚರವಾಗಿದೆ.

ಆಧುನಿಕ ಶಸ್ತ್ರಾಸ್ತ್ರಗಳನ್ನು ಇವರು ಹೊಂದಿದ್ದಾರೆ. ಸಿಟಿಡಿ ಪ್ರಧಾನ ಕಚೇರಿಯಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸುಬೇದಾರ್ ಮೇಜರ್ ಖುರ್ಷಿದ್ ಅಕ್ರಮ್ ಸೇರಿ ಎಂದು ಯೋಧರನ್ನು ಒತ್ತೆಯಾಳಾಗಿ ಇರಿಸಲಾಗಿದೆ. ಅಫ್ಘಾನಿಸ್ತಾನಕ್ಕೆ ತೆರಳಲು ಮಾರ್ಗವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!