ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಫಾ ವಿಶ್ವಕಪ್ ಫುಟ್‌ಬಾಲ್ ಶುರುವಾಗಲು ಕ್ಷಣಗಣನೆ ಬಾಕಿ ಇದ್ದು, ಇದರ ನಡುವೆ ಪಂದ್ಯ ವೀಕ್ಷಿಸುವ ಆಸೆ ಹೊಂದಿದ್ದ ಅಭಿಮಾನಿಗಳಿಗೆ ಕತಾರ್ ಅಧಿಕಾರಿಗಳು ಕಹಿ ಸುದ್ದಿ ನೀಡಿದ್ದಾರೆ.
ಅದೇನೆಂದರೆ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಬಿಯರ್ ನಿಷೇಧಿಸಲಾಗುವುದು. ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಾಗಾಗಿ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯ ಮಾರಾಟ ಮಾಡಬಾರದು ಎಂಬ ನಿರ್ಧಾರಕ್ಕೆ ಕತಾರ್ ಅಧಿಕಾರಿಗಳು ಬಂದಿದ್ದಾರೆ.
ಕತಾರ್‌ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯಲು ಅನುಮತಿಯಿಲ್ಲದ ಕಾರಣ ಈವೆಂಟ್‌ನ ಸಮಯದಲ್ಲಿ ಅಭಿಮಾನಿಗಳಿಗೆ ಆಲ್ಕೋಹಾಲ್ ಲಭ್ಯತೆ ವಿಚಾರವಾಗಿ ಕಾಳಜಿ ವಹಿಸಲಾಗಿದೆ.ಸ್ಟೇಡಿಯಂಗಳಲ್ಲಿ ಬಿಯರ್ ಮಾರಾಟ ಮಾಡದಿರುವ ಹಠಾತ್ ನಿರ್ಧಾರವು ಅಭಿಮಾನಿಗಳಿಗೆ ಮಾತ್ರವಲ್ಲದೆ ಫಿಫಾಗೆ ದೊಡ್ಡ ಆಘಾತವನ್ನು ನೀಡಿದೆ. ಏಕೆಂದರೆ ಫಿಫಾ, ಅಮೆರಿಕನ್ ಬಿಯರ್ ದೈತ್ಯ ಬಡ್ವೈಸರ್ ಜೊತೆಗೆ ಬಹು ಮಿಲಿಯನ್ ಡಾಲರ್ ಪ್ರಚಾರದ ಒಪ್ಪಂದ ಮಾಡಿಕೊಂಡಿದೆ.