ಶರಾವತಿ ಸಂತ್ರಸ್ತರ ಕ್ಷಮೆ ಕೇಳಲು ಪಾದಯಾತ್ರೆ ‌ಮಾಡಿ: ಸಂಸದ ರಾಘವೇಂದ್ರ

ಹೊಸದಿಗಂತ ವರದಿ,ಶಿವಮೊಗ್ಗ:

ಶರಾವತಿ ಮುಳುಗಡೆ ಸಂತ್ರಸ್ಥರಿಗೆ 60 ವರ್ಷ ಅಧಿಕಾರ ಇದ್ದಾಗ ನ್ಯಾಯ ಕೊಡಿಸಲಿಲ್ಲ ಎಂದು ಕ್ಷಮೆ ಕೇಳಲು ಪಾದಯಾತ್ರೆ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ವ್ಯಂಗ್ಯವಾಡಿದ್ದಾರೆ.

ಜಿಲ್ಲಾ ಬಿಜೆಪಿ ವತಿಯಿಂದ ನಗರದ ಆರ್ಯ ಈಡಿಗರ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶರಾವತಿ ಮುಳುಗಡೆ ಸಂತ್ರಸ್ಥರ ಸ‘ೆಯಲ್ಲಿ ಅವರು ಮಾತನಾಡಿದರು.

ಶರವಾತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಆರಂ‘ವಾಗಿದ್ದು 1958ರಿಂದ. 1980ರವರೆಗೆ ಅರಣ್ಯ ಸಂರಕ್ಷಣೆ ಕಾಯಿದೆ ಬರುವ ಮೊದಲು ರಾಜ್ಯ ಸರ್ಕಾರವೇ ಸಮಸ್ಯೆ ಪರಿಹಾರಕ್ಕೆ ಅವಕಾಶ ಇತ್ತು. ಆದರೆ ಯಾವ ಪ್ರಯತ್ನವನ್ನೂ ಮಾಡದೇ 2017 ರಲ್ಲಿ ಜ್ನಾನೋದಯವಾಗಿ ಪರಿಹಾರಕ್ಕೆ ಮುಂದಾದರು. 2017ರ ಚುನಾವಣಾ ಪೂರ್ವದಲ್ಲಿ ಕೇಂದ್ರದ ಒಪ್ಪಿಗೆಯೇ ಇಲ್ಲದೇ ಭೂಮಿ ಡಿನೋಟಿೈ ಮಾಡಿದರು. ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ ಎಂದು ತಿಳಿಸಿದರು.

ಇದನ್ನೇ ಪರಿಸರವಾದಿಗಳು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದರು. ಕೇಂದ್ರದ ಒಪ್ಪಿಗೆ ಪಡೆದ ಭೂಮಿ ಮಂಜೂರು ಮಾಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಇನ್ನು 15-20 ದಿನದಲ್ಲಿ ಶಿವಮೊಗ್ಗದಿಂದ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಹೋಗಲಿದೆ ಎಂದರು.
ದೇಶದಲ್ಲಿ 60 ವರ್ಷ ಕಾಂಗ್ರೆಸ್, ಬಿಜೆಪಿ 10 ವರ್ಷ ಆಡಳಿತ ನಡೆಸಿದೆ. ರಾಜ್ಯದಲ್ಲಿ 35 ವರ್ಷ ಕಾಂಗ್ರೆಸ್, 11 ವರ್ಷ ಜೆಡಿಎಸ್-ಕಾಂಗ್ರೆಸ್ ಹಾಗೂ 8 ವರ್ಷ ಬಿಜೆಪಿ ಆಡಳಿತ ನಡೆಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯವರೇ ಮುಖ್ಯಮಂತ್ರಿ, ಕಂದಾಯ ಮಂತ್ರಿ, ಅರಣ್ಯ ಮಂತ್ರಿ ಎಲ್ಲರೂ ಇದ್ದರು. ಅವರದೇ ಪಕ್ಷದ ಪ್ರಧಾನ ಮಂತ್ರಿಗಳಿದ್ದರು. ಯಾಕೆ ಆಗ ಪರಿಹಾರ ಮಾಡಲಿಲ್ಲ? ಕಾನೂನು ಗೊತ್ತಿರಲಿಲ್ವಾ ಎಂದು ವಾಗ್ದಾಳಿ ನಡೆಸಿದರು.

ಗೃಹ ಸಚಿವ ಆರಗ ಜ್ನಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆಶೋಕ ನಾಯ್ಕ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಬೆಳ್ಳೂರು ತಿಮ್ಮಪ್ಪ, ಟಿ.ಡಿ.ಮೇಘರಾಜ್  ಇನ್ನಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!