‌ ಕತಾರ್ ವಿಶ್ವಕಪ್: LGBTQ‌ ಸಮುದಾಯ ಸಂಕೇತಿಸುವ ʼರೈನ್‌ ಬೋʼ ಶರ್ಟ್ ಧರಿಸಿದ್ದ ಅಮೆರಿಕಾ ಪತ್ರಕರ್ತ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಸ್ತುತ ಕತಾರ್‌ನಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಅನ್ನು ವರದಿ ಮಾಡಲು ತೆರಳಿದ್ದ ಅಮೆರಿಕ  ಪತ್ರಕರ್ತನನ್ನು ʼರೈನ್ ಬೋʼ (ಮಳೆಬಿಲ್ಲು) ಶರ್ಟ್ ಧರಿಸಿದ್ದಕ್ಕಾಗಿ ಬಂಧಿಸಲಾಗಿದೆ.
ಸೋಮವಾರ ಅಮೆರಿಕ ಮತ್ತು ವೇಲ್ಸ್ ನಡುವಿನ ಪಂದ್ಯಕ್ಕಾಗಿ ಅಲ್ ರಯಾನ್‌ನ ಅಹ್ಮದ್ ಬಿನ್ ಅಲಿ ಸ್ಟೇಡಿಯಂಗೆ ಪ್ರವೇಶಿಸುತ್ತಿದ್ದ ಪತ್ರಕರ್ತ ಗ್ರಾಂಟ್ ವಾಲ್ ಅವರು ಧರಿಸಿದ್ದ ಅಂಗಿಯಲ್ಲಿ ಕಾಮನಬಿಲ್ಲಿನಿಂದ ಸುತ್ತುವರಿದ ಫುಟ್ಬಾಲ್‌ ಚೆಂಡಿನ ಚಿತ್ರ ಇದ್ದಿದ್ದರಿಂದ ಅವರಿಗೆ ಪ್ರವೇಶ ನೀಡಲು ಅನುಮತಿ ನಿರಾಕರಿಸಲಾಗಿತ್ತು.
ಗ್ರಾಂಟ್ ವಾಲ್ LGBTQ ಸಮುದಾಯಕ್ಕೆ ಬೆಂಬಲ ಸೂಚಿಸಲು ಶರ್ಟ್‌ ಧರಿಸಿದ್ದರು. ಗ್ರಾಂಟ್ ವಾಲ್ ಅವರು ಫುಟ್‌ಬಾಲ್ ಕ್ರೀಡೆಗಾಗಿ ತಮ್ಮದೇ ಆದ ವೆಬ್‌ಸೈಟ್ ಅನ್ನು ನಡೆಸುತ್ತಾರೆ ಮತ್ತು ಮೊದಲು ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್‌ಗಾಗಿ ಕೆಲಸ ಮಾಡುತ್ತಿದ್ದರು.
“ನೀವು ನಿಮ್ಮ ಅಂಗಿಯನ್ನು ಬದಲಾಯಿಸಬೇಕು. ಇದನ್ನು ಅನುಮತಿಸಲಾಗುವುದಿಲ್ಲ, ”ಎಂದು ತನಗೆ ತಿಳಿಸಲಾಗಿದೆ ಎಂದು ಗ್ರಾಂಟ್ ವಾಹ್ಲ್ ಟ್ವೀಟ್ ಮಾಡಿದ್ದಾರೆ.  ಅವರು ಘಟನೆಯ ಬಗ್ಗೆ ಟ್ವೀಟ್ ಮಾಡಿದಾಗ ಬಂಧಿಸಿ ಫೋನ್ ಕಿತ್ತುಕೊಳ್ಳಲಾಯಿತು ಎಂದು ಅವರು ಆರೋಪಿಸಿದರು.
ಭದ್ರತಾ ಕಮಾಂಡರ್ ತನ್ನ ಬಳಿಗೆ ಬಂದು ಕ್ಷಮೆಯಾಚಿಸಿದ ನಂತರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿಸಲಾಯಿತು ಎಂದು ಗ್ರಾಂಟ್ ವಾಲ್ ಹೇಳಿದರು. ಫಿಫಾ ಪ್ರತಿನಿಧಿಯಿಂದ ಕ್ಷಮೆಯಾಚನೆಯನ್ನು ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು.
ಕತಾರಿ ಕಾನೂನು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುತ್ತದೆ ಮತ್ತು ಸಲಿಂಗಕಾಮದ ಯಾವುದೇ ಲೈಂಗಿಕ ಕ್ರಿಯೆಗಳನ್ನು ಪ್ರದರ್ಶಿಸುವುದು ಕಂಡುಬಂದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಅಲ್ಲಿನ ಷರಿಯಾ ಕಾನೂನಿನ ಅಡಿಯಲ್ಲಿ, ಸಲಿಂಗ ಸಂಬಂಧಗಳಿಗೆ ಗರಿಷ್ಠ ಶಿಕ್ಷೆ ಮರಣದಂಡನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!