ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ದೇಶವೇ ಬೆಚ್ಚಿ ಬೀಳುವಂಥ ಘಟನೆಯೊಂದು ನಡೆದಿದೆ. ಐದನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಮೂವರು ಸಾಮಹೀಕ ಅತ್ಯಾಚಾರ ಎಸಗಿದ್ದಾರೆ.
ಶಾಲೆಯ ಪ್ಯೂನ್ ಹಾಗೂ ಆತನ ಇನ್ನಿಬ್ಬರು ಸಹಚರರು ವಿದ್ಯಾರ್ಥಿನಿಗೆ ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪ್ಯೂನ್ ಅಜಯ್‌ನನ್ನು ಬಂಧಿಸಲಾಗಿದೆ. ಆತನ ಇಬ್ಬರು ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಗಾಜಿಯಾಬಾದ್ ನಿವಾಸಿ ಅಜಯ್ ಮುನ್ಸಿಪಲ್ ಕಾರ್ಪೋರೇಷನ್ ಸ್ಕೂಲ್‌ನಲ್ಲಿ ೧೦ ವರ್ಷದಿಂದ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅತ್ಯಾಚಾರದ ನಂತರ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ಅಂತಿಮ ಪರೀಕ್ಷೆಗೂ ಆಕೆ ಹಾಜರಾಗಿಲ್ಲ. ವಿದ್ಯಾರ್ಥಿನಿಯ ಶಾಲಾ ಶಿಕ್ಷಕಿ ಪೋಷಕರಿಗೆ ಕರೆ ಮಾಡಿ ಮಾತನಾಡಿದ ನಂತರ ಬಾಲಕಿ ಪೋಷಕರಿಗೆ ನಡೆದಿದ್ದನ್ನು ವಿವರಿಸಿದ್ದಾಳೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೌನ್ಸಿಲಿಂಗ್ ಮಾಡಲಾಗಿದೆ.