ಮಂಕಿಪಾಕ್ಸ್ ವಿರುದ್ಧ ಸಮರ: ಸಂಭಾವ್ಯ ಸ್ಥಿತಿ ಎದುರಿಸಲು ಸಜ್ಜಾದ ಕೇರಳ ವೈದ್ಯರ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ದೇಶದ ಎರಡನೇ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ  ಸಮರೋಪಾದಿಯ ಕ್ರಮ ಕೈಗೆತ್ತಿಕೊಂಡಿರುವ ಕೇರಳ ಸರ್ಕಾರ, ಸರ್ಕಾರಿ ಹಾಗೂ ಖಾಸಗಿ ವಲಯದ ಬರೋಬ್ಬರಿ 1200ಕ್ಕೂ ಹೆಚ್ಚು  ವೈದ್ಯರುಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಸಂಭಾವ್ಯ ಪರಿಸ್ಥಿತಿ ನಿರ್ವಹಣೆಗೆ ಸಜ್ಜುಗೊಳಿಸಲಾಗುತ್ತದೆ.
ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳ ವೈದ್ಯರು, ಆಯುಷ್ ಕ್ಷೇತ್ರದ ವೈದ್ಯರಿಗೆ ಕೂಡಾ ಐಎಂಎ ಸಹಯೋಗದಲ್ಲಿ ತರಬೇತಿ ಆರಂಭವಾಗಿದೆ. ಇದಲ್ಲದೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ನೌಕರರಿಗೂ ತರಬೇತಿ ಆಯೋಜಿಸಲಾಗುತ್ತಿದೆ.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬಂದಿದ್ದ ಇನ್ನೋರ್ವ ಪ್ರಯಾಣಿಕನಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ  ಕೇರಳದ ಎಲ್ಲೆಡೆ ನಿಗಾ ಇನ್ನಷ್ಟು ಹೆಚ್ಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!