ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪ್ರಾಥಮಿಕ ಶಾಲೆಯ 2 ನೇ ತರಗತಿ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಈ ಜಗಳದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಕಿಶನ್‌ಪುರ ಗ್ರಾಮದ ಶಾಲೆಯಲ್ಲಿ ಮಂಗಳವಾರ ಸಹಪಾಠಿಗಳ ನಡುವೆ ನಡೆದ ಹೊಡೆದಾಟದ ವೇಳೆ ವಿದ್ಯಾರ್ಥಿಯೊಬ್ಬ ಎದೆ ಮೇಲೆ ಹಾರಿದ್ದರಿಂದ ಬಾಲಕ ಶಿವಂ ಮೃತಪಟ್ಟಿದ್ದಾನೆ. 7 ವರ್ಷದ ಶಿವಂ ನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಂತರಿಕ ಗಾಯಗಳಿಂದ ಕುಸಿದಿದ್ದ ಆತ ಸಾವನ್ನಪ್ಪಿದ್ದಾನೆ.
ಶಾಲೆಯ ಆಡಳಿತ ಮಂಡಳಿಯನ್ನು ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶಿಕೋಹಾಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹರವೀಂದ್ರ ಮಿಶ್ರಾ ತಿಳಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ರವಿ ರಂಜನ್, ಮೂಲ ಶಿಕ್ಷಣಾಧಿಕಾರಿ ಆಶಿಶ್ ಕುಮಾರ್ ಪಾಂಡೆ ಮತ್ತು ಎಸ್‌ಡಿಎಂ ಶಿಕೋಹಾಬಾದ್ ಶಿವ ಧ್ಯಾನ್ ಪಾಂಡೆ ವಿಷಯದ ತನಿಖೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಫೊರೆನ್ಸಿಕ್ ವರದಿ ಬಂದ ನಂತರ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವಿಚಾರಣೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ