ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಜಿ-20 ಶೃಂಗಸಭೆಯ ಪ್ರತಿನಿಧಿಗಳು: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನ ಕೊಲಾಬಾ ಮಾರ್ಗವಾಗಿ ಮಂಗಳವಾರ ರಾತ್ರಿ ಗಿರ್ಗಾಂವ್ ಚೌಪಾಟಿಯಲ್ಲಿ ಸ್ಥಳೀಯ ಸಾಂಪ್ರದಾಯಿಕ ನೃತ್ಯಗಾರರೊಂದಿಗೆ G20 ಪ್ರತಿನಿಧಿಗಳು ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು. ಸ್ಥಳೀಯ ಮಹಿಳೆಯರ ನೃತ್ಯ ಅನುಕರಣೆ ಮಾಡುತ್ತಾ ಹೆಜ್ಜೆ ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪ್ರಮುಖ ಸುದ್ದಿ ಸಂಸ್ಥೆ ANI ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ವೀಡಿಯೊದಲ್ಲಿ, G20 ಪ್ರತಿನಿಧಿಗಳ ಗುಂಪು ಮಹಾರಾಷ್ಟ್ರದ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ. ಗಿರ್ಗಾಂವ್ ಚೌಪಾಟಿಯಲ್ಲಿ ಅವರನ್ನು ಡೋಲು, ಲಾವಣಿ ಮತ್ತು ಕೋಲಿ ಹಾಡುಗಳೊಂದಿಗೆ ಸ್ವಾಗತಿಸಲಾಯಿತು.

ಮುಂಬರುವ ತಿಂಗಳುಗಳಲ್ಲಿ ಜಿ20 ಪ್ರತಿನಿಧಿಗಳು ಕರ್ನಾಟಕದ ಭೋಗ ನಂದೀಶ್ವರ ದೇವಸ್ಥಾನ, ಮಧ್ಯಪ್ರದೇಶದ ಸಾಂಚಿ ಸ್ತೂಪ, ಹೈದರಾಬಾದ್‌ನ ಚಾರ್ಮಿನಾರ್, ತಮಿಳುನಾಡಿನ ಗೋಲ್ಕೊಂಡ ಕೋಟೆಗೆ ಭೇಟಿ ನೀಡಲಿದ್ದಾರೆ. ರಾಜಸ್ಥಾನದ ಮಾಮಲ್ಲಪುರಂ ಕೋಸ್ಟ್ ಟೆಂಪಲ್, ಮಂಡೋರ್ ಫೋರ್ಟ್ ಮತ್ತು ಮಂಡೋರ್ ಗಾರ್ಡನ್ ಸೇರಿದಂತೆ ಸ್ಮಾರಕಗಳು ಮತ್ತು ದೇವಾಲಯಗಳಿಗೂ ಭೇಟಿ ನೀಡಲಾಗುವುದು. ಆಗ್ರಾದ ತಾಜ್ ಮಹಲ್, ದೆಹಲಿಯ ಕುತುಬ್ ಪುರಾತತ್ವ ಪಾರ್ಕ್, ಮಟ್ಟಂಚೇರಿ ಅರಮನೆ, ಕೊಚ್ಚಿಯ ಸೇಂಟ್ ಫ್ರಾನ್ಸಿಸ್ ಚರ್ಚ್ ಇತ್ಯಾದಿಗಳಿಗೆ ಭೇಟಿ ನೀಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!