ಹೊಸದಿಗಂತ ವರದಿ, ಮಡಿಕೇರಿ:
ಮೊಬೈಲ್ ವಿಚಾರವಾಗಿ ಸಹೋದರನೊಂದಿಗೆ ಜಗಳವಾಡಿ ಮನೆಯಿಂದ ತೆರಳಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ.
ಕುಶಾಲನಗರದ ಆದಿಶಂಕರಾಚಾರ್ಯ ಬಡಾವಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನಾ(19) ಮೃತಪಟ್ಟ ಯುವತಿ.
ಎಸ್‌ಎಸ್ಎಲ್‌ಸಿ ಮುಗಿಸಿ ಮನೆಯಲ್ಲಿದ್ದ ಭಾವನಾ (19) ಬಿಡುವಿನ ವೇಳೆಯಲ್ಲಿ ಕುಶಾಲನಗರದ ರಥಬೀದಿಯಲ್ಲಿರುವ ತಂದೆಯ ಫ್ಯಾನ್ಸಿ ಸ್ಟೋರ್’ನಲ್ಲಿ ನೆರವಾಗುತ್ತಿದ್ದಳೆನ್ನಲಾಗಿದೆ.
ಕಳೆದ ಭಾನುವಾರ (ಡಿ.8) ಸಂಜೆ ಮೊಬೈಲ್ ವಿಚಾರವಾಗಿ ಭಾವನಾ ಹಾಗೂ ಆಕೆಯ ಸಹೋದರ ಮಹಿಪಾಲ್ ನಡುವೆ ಜಗಳವಾಗಿದ್ದು, ರಾತ್ರಿ ಅಂಗಡಿಯಿಂದ ತೆರಳಿದ್ದ ಆಕೆ ಮನೆಗೆ ಮರಳದೆ ನಾಪತ್ತೆಯಾಗಿದ್ದಳು.
ಸಹೋದರನೊಂದಿಗೆ ಜಗಳವಾಡಿಕೊಂಡು ಸ್ನೇಹಿತರು ಇಲ್ಲವೇ ಸಂಬಂಧಿಕರ ಮನೆಗೆ ತೆರಳಿರಬಹುದೆಂದು ಭಾವಿಸಿದ್ದ ಮನೆ ಮಂದಿ, ಮರುದಿನವೂ ಆಕೆ ಮರಳದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾ
ಕುಶಾಲನಗರದ ವಿವಿಧ ಸಿಸಿ ಕ್ಯಾಮರಾಗಳ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ ಅಲ್ಲಿನ ಅಯ್ಯಪ್ಪ ದೇವಾಲಯದ ಬಳಿ ಕಾವೇರಿ ನದಿಯತ್ತ ತೆರಳಿರುವ ದೃಶ್ಯ ದಾಖಲಾಗಿದ್ದು,ಅಲ್ಲಿಂದ ವಾಪಾಸಾದ ಸುಳಿವು ಲಭ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಕಾವೇರಿ ನದಿಯಲ್ಲಿ ಶೋಧ ನಡೆಸಿದಾಗ ಆಕೆಯ ಮೃತದೇಹ ಅಯ್ಯಪ್ಪ ದೇವಾಲಯದ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಸಹೋದರನೊಂದಿಗೆ ನಡೆದ ಜಗಳದಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.