ಏಕಾಂಗಿಯಾಗಿ ಹೋರಾಡುವೆ: ಆಪ್ ನಾಯಕರ ವಿರುದ್ಧ ಗುಡುಗಿದ ಸ್ವಾತಿ ಮಲಿವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆಮ್ ಆದ್ಮಿ ಪಾರ್ಟಿ ತಮ್ಮ ಸಂಸದೆ ವಿರುದ್ಧವೇ ತಿರುಗಿನಿಂತಿದ್ದು, ಈ ಘಟನೆ ನಡೆದೇ ಇಲ್ಲ, ಸ್ವಾತಿ ಮಲಿವಾಲ್ ಆರೋಪ ಸುಳ್ಳು ಎಂದಿದೆ.

ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಲಿವಾಲ್ , ಆಪ್ ಪಕ್ಷ ಹಾಗೂ ನಾಯಕ ಯುಟರ್ನ್ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಏಕಾಂಗಿಯಾಗಿ ಹೋರಾಡುವುದಾಗಿ ಹೇಳಿದ್ದಾರೆ.

ನಿನ್ನೆ ಮೊನ್ನೆ ಪಾರ್ಟಿಗೆ ಸೇರಿದ ನಾಯಕರು, ಕಳೆದ 20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನನ್ನನ್ನು ಬಿಜೆಪಿ ಎಜೆಂಟ್ ಎಂದು ಕರೆದಿದ್ದಾರೆ. ಎರಡು ದಿನಗಳ ಹಿಂದೆ ಆಪ್ ಪಾರ್ಟಿ ಘಟನೆ ನಡೆದಿದೆ ಎಂದು ಒಪ್ಪಿಕೊಂಡಿತ್ತು. ಇದೀಗ ಯೂಟರ್ನ್ ಹೊಡೆದಿದೆ. ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ. ಅರೆಸ್ಟ್ ಆದರೆ ಎಲ್ಲಾ ಮಾಹಿತಿ ಬಹಿರಂಗಗೊಳಿಸುತ್ತೇನೆ. ಹೀಗಾಗಿ ಗೂಂಡಾ ಲಖನೌನದಲ್ಲಿ ಆಶ್ರಯ ಪಡೆಯುವ ಪ್ರಯತ್ನದಲ್ಲಿದ್ದಾರೆ. ಗೂಂಡಾನನ್ನು ಉಳಿಸಲು ಇದೀಗ ಆಮ್ ಆದ್ಮಿ ಪಾರ್ಟಿ ಯೂಟರ್ನ್ ಹೊಡದಿದೆ. ನನ್ನ ಚಾರಿತ್ಯವನ್ನೇ ನಾಯಕರು, ಆಪ್ ಪ್ರಶ್ನಿಸುತ್ತಿದೆ. ನಾನು ಏಕಾಂಗಿಯಾಗಿ ಈ ದೇಶದ ಮಹಿಳಾ ಪರವಾಗಿ ಹೋರಾಡುತ್ತೇನೆ. ಏನೇ ಮಾಡಿದರೂ ಸತ್ಯ ಹೊರಗೆ ಬರುತ್ತದೆ ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿ ಗುಡುಗಿದ್ದಾರೆ.

ಇತ್ತ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಅವರು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಬೆದರಿಕೆ ಒಡ್ಡುತ್ತಿರುವಂತಹ ವಿಡಿಯೋ ವೈರಲ್‌ ಆಗಿದೆ. ಇದು ಸಿಎಂ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಅವರಿಂದ ಹಲ್ಲೆಗೊಳಗಾದ ನಂತರದ ವಿಡಿಯೋ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!