ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ಯಾರಿಸ್ ಒಲಿಂಪಿಕ್ಸ್ ನ 50 ಕೆಜಿ ಮಹಿಳೆಯರ ಫೈನಲ್ ಕುಸ್ತಿ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಬಳಿಕ ಫೈನಲ್ ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್ ಅವರು ಫೋಗಟ್ ವಿರುದ್ಧ ಸೆಮಿಫೈನಲ್ನಲ್ಲಿ ಸೋತಿದ್ದ ಗುಜ್ಮನ್ ಲೋಪೆಜ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿದ್ದಾರೆ ಎಂಬ ಕಾರಣಕ್ಕೆ ಫೈನಲ್ ಪಂದ್ಯದಿಂದ ವಿನೇಶ್ರನ್ನು ಐಒಸಿ ಅನರ್ಹಗೊಳಿಸಿತು. ಇನ್ನು ಫೈನಲ್ನಲ್ಲಿ ವಿನೇಶ್ ಎದುರಾಳಿಯಾಗಿದ್ದ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್, ಮಹಿಳೆಯರ ಫೈನಲ್ ಕುಸ್ತಿ ಪಂದ್ಯದಲ್ಲಿ ಫೋಗಟ್ ವಿರುದ್ಧ ಸೆಮಿಫೈನಲ್ನಲ್ಲಿ ಸೋತಿದ್ದ ಗುಜ್ಮನ್ ಲೋಪೆಜ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ನಾಲ್ಕನೇ ಯುಎಸ್ ಮಹಿಳೆಯಾಗಿ ಹೊರಹೊಮ್ಮಿದ ಸಾರಾ, ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿನೇಶ್ ಅನರ್ಹಗೊಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
‘ಎಲ್ಲವೂ ಸರಿಯಿದ್ದಿದ್ರೆ, ಇಂದು ನಾನು ಮತ್ತು ಫೋಗಟ್ ಅವರು ಫೈನಲ್ ಪಂದ್ಯದಲ್ಲಿ ಸೆಣಸಾಡುತ್ತಿದ್ದೆವು. ಆದ್ರೆ, ಅವರನ್ನು ಅನರ್ಹಗೊಳಿಸಿದ್ದಾರೆ ಎಂಬ ಸುದ್ದಿ ನಿಜಕ್ಕೂ ಭಾರೀ ಬೇಸರ ಮೂಡಿಸಿದೆ. ದೇಹ ತೂಕದ ಜತೆ ಹೋರಾಡುವುದು ದೊಡ್ಡ ಸವಾಲು. ಅವರಂತೆಯೇ ನಾನು ಕೂಡ ತೂಕ ಇಳಿಕೆ ಮಾಡಲು ಬಹಳ ಕಸರತ್ತು ಮಾಡಿದ್ದೇನೆ’ ಎಂದರು.
‘ದೇಹ ತೂಕ ಇಳಿಸುವಲ್ಲಿ ನಾನು ಹರಸಾಹಸ ಪಟ್ಟಿರುವ ಹಿನ್ನಲೆ ನನಗೆ ವಿನೇಶ್ರ ನೋವೇನು ಎಂಬುದು ಅರ್ಥವಾಗುತ್ತದೆ. ಪಂದ್ಯಕ್ಕೂ ಮುನ್ನ ವಿಭಿನ್ನ ಹಾಗೂ ವಿಚಿತ್ರ ರೀತಿಯಲ್ಲಿ ತೂಕ ಇಳಿಕೆಗೆ ಶ್ರಮಿಸಿದ್ದೇನೆ. ಆದ್ರೆ, ಫೋಗಟ್ರಿಗೆ ಇಂತಹ ಸೋಲು ನಿಜಕ್ಕೂ ಸೂಕ್ತವಲ್ಲ. ಅವರೊಬ್ಬರು ಅದ್ಭುತ ಚಾಂಪಿಯನ್, ಬಲಿಷ್ಠ ಸ್ಪರ್ಧಿ. ಎಲ್ಲದಕ್ಕಿಂತ ಒಳ್ಳೆಯ ಮನಸ್ಸಿನ ವ್ಯಕ್ತಿ. ಅವರಿಗಾಗಿ ನನ್ನ ಮನ ಮಿಡಿಯುತ್ತಿದೆ’ ಎಂದು ಭಾವುಕರಾಗಿಯೇ ಮಾತನಾಡಿದರು.