July 21, 2026
Tuesday, July 21, 2026
spot_img

ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.ಬಿಗ್ ಬಾಸ್ ಮನೆಯಲ್ಲಿ ಅಶ್ಲೀಲ/ಜಾತಿನಿಂದನೆ ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಹ ಸ್ಪರ್ಧಿ ರಕ್ಷಿತಾ ಕುರಿತು ಈ ಮಾತನ್ನು ಆಡಿದ್ದಾರೆ. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು.  ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ ದಾಖಲಿಸಿದ್ದಾರೆ.

ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ She is S, ಆ Categoryʼ ಎಂದು  ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ. ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ  ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್‌ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !