CINE | ಮಹಾನಟಿ ರಿಯಾಲಿಟಿ ಶೋ ವಿರುದ್ಧ ದೂರು ದಾಖಲು, ಅಂಥದ್ದೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ವಿರುದ್ಧ ದೂರು ದಾಖಲಾಗಿದೆ. ಜಡ್ಜ್‌ಗಳಾದ ಪ್ರೇಮ, ರಮೇಶ್‌ ಅರವಿಂದ್‌ ಹಾಗೂ ಆಂಕರ್‌ ಅನುಶ್ರೀ ವಿರುದ್ಧ ದೂರು ದಾಖಲಾಗಿದೆ.

ಈ ಶೋನಲ್ಲಿ ಸ್ಪರ್ಧಿಯೊಬ್ಬರು ಆ್ಯಕ್ಟಿಂಗ್ ಮಾಡುವಾಗ ಬಳಕೆ ಮಾಡಿದ ಶಬ್ದ ಚರ್ಚೆ ಹುಟ್ಟುಹಾಕಿದೆ. ‘ಮೆಕ್ಯಾನಿಕ್​ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ ’ ಎನ್ನುವ ವಾಕ್ಯ ಬಳಕೆ ಆಗಿದೆ. ಇದು ಮೆಕ್ಯಾನಿಕ್​ ಕೆಲಸ ಮಾಡುವವರ  ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.

ಚಿಕ್ಕನಾಯಕನಹಳ್ಳಿಯ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್‌ಶಾಪ್ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ದಾಖಲು ಮಾಡಿದ್ದಾರೆ. ಈ ಶೋನ ನಿರ್ಮಾಪಕರು, ನಿರ್ದೇಶಕರು, ದೃಶ್ಯದಲ್ಲಿ ಆ್ಯಕ್ಟ್ ಮಾಡಿದ ಗಗನಾ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದರಲ್ಲಿ  ಆ್ಯಂಕರ್ ಅನುಶ್ರೀ, ಜಡ್ಜ್​ಗಳಾದ ರಮೇಶ್ ಅರವಿಂದ್, ನಟಿ ಪ್ರೇಮಾ ಹೆಸರು ಕೂಡ ಇದೆ. ಮೆಕ್ಯಾನಿಕ್‌ ಹಾಗೂ ಮೆಕ್ಯಾನಿಕ್‌ ಕುಟುಂಬಗಳು ಅನ್ನವನ್ನೇ ತಿಂತಿದ್ದಾರೆ, ಯಾರೂ ಗ್ರೀಸ್‌ ತಿನ್ನೋದಿಲ್ಲ. ಈ ರೀತಿ ಒಂದು ಕೆಲಸವನ್ನು ಇಟ್ಟುಕೊಂಡು ತಮಾಷೆ ಮಾಡೋದು ತಪ್ಪು ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!