ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತನ್ನ ತಾಯಿಗೆ ಮುದ್ದಾದ ನಾಯಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು.
ತಾಯಿಗೆ ಸರ್ಪೈಸ್ ಆಗಿ ನಾಯಿಮರಿ ನೀಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ನಾಯಿಮರಿಗೆ ನೂರಿ ಎಂದು ಹೆಸರಿಡಲಾಗಿತ್ತು. ಇದೀಗ ಮುಸ್ಲಿಂ ಹೆಸರನ್ನು ನಾಯಿಮರಿಗೆ ಇಟ್ಟಿದ್ದಾರೆ ಎನ್ನುವ ವಿವಾದ ಎದ್ದಿದೆ.
ಮುಸ್ಲಿಂ ಸಮುದಾಯಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಎಐಎಂಐಎಂ ರಾಜ್ಯ ವಕ್ತಾರ ಮೊಹಮ್ಮದ್ ಫರ್ಹಾನ್ ಪ್ರಯಾಗ್ರಾಜ್ನ ಸಿಜೆಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಇಸ್ಲಾಂನಲ್ಲಿ ನೂರಿ ಎನ್ನುವ ಪದಕ್ಕೆ ಪವಿತ್ರ ಅರ್ಥವಿದೆ, ಪ್ರವಾದಿ ಮೊಹಮ್ಮದ್ಗೆ ಸಂಬಂಧಿಸಿದ ಹೆಸರು ಇದಾಗಿದೆ, ನೂರ್ ಎನ್ನುವ ಪದದ ಉಲ್ಲೇಖ ಕುರಾನ್ನಲ್ಲಿಯೂ ಇದೆ. ಈ ರೀತಿ ಹೆಸರನ್ನು ನಾಯಿಮರಿಗೆ ಇಟ್ಟಿರುವುದು ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಕೆಲಸ ಎಂದು ಆರೋಪಿಸಿದ್ದಾರೆ.