ಶಿವಮೊಗ್ಗದಲ್ಲಿ ನ.14 ರಂದು ಆಟೋಗಳಿಗೆ ಅಂತಿಮ ಪ್ರಯಾಣ ದರ ನಿಗದಿ: ಜಿಲ್ಲಾಧಿಕಾರಿ

ಹೊಸದಿಗಂತ ವರದಿ, ಶಿವಮೊಗ್ಗ :

ನಗರದಲ್ಲಿ ಸಂಚರಿಸುವ ಆಟೋಗಳಿಗೆ ಅಂತಿಮ ಪ್ರಯಾಣ ದರವನ್ನು ನವೆಂಬರ್ 14 ರಂದು ಪ್ರಕಟಿಸಲಾಗುವುದು. ಅಂದಿನಿಂದಲೇ ಮೀಟರ್ ಕಡ್ಡಾಯ ಎಂದು ಜಿಲ್ಲಾಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.
ಜಿಲ್ಲಾಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಾರಿಗೆ ಪ್ರಾಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಆಟೋ ಪ್ರಯಾಣದ ದರವನ್ನು ಆರಂಭದ ಒಂದೂವರೆ ಕಿಮೀಗೆ 40 ರಿಂದ 50 ರೂ.ವರೆಗೆ ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದೀರಿ. ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ  ಮೊದಲ ಹಂತದಲ್ಲಿ 40 ರೂ.ಗಳಿಗೆ ನಿಗದಿ ಮಾಡಿರುವ ಮಾಹಿತಿ ಇದೆ. ಇತರೆ ಜಿಲ್ಲೆಗಳಲ್ಲಿ ಯಾವ ದರ ನಿಗದಿ ಮಾಡಿದ್ದಾರೆ ಎಂಬ ವರದಿ ತರಿಸಿಕೊಂಡು ಅಂತಿಮ ದರವನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಜ್ಗರ್ ಭಾಷಾ ಮಾತನಾಡಿ, ಆಟೋ ಪ್ರಯಾಣ ದರವನ್ನು 50 ರೂ.ಗಳಿಗೆ ಮೊದಲ ಹಂತದಲ್ಲಿ ನಿಗದಿ ಮಾಡಬೇಕು. ನಂತರದ ಪ್ರತಿ ಕಿಮೀಗೆ 20 ರೂ. ನಿಗದಿ ಮಾಡಬೇಕು ಎಂದು ಕೋರಿದರು.
ಸಂಘದ ಕಿರಣ್ ಮಾತನಾಡಿ,  ನಗರ ವ್ಯಾಪ್ತಿಯನ್ನು 10 ಕಿಮೀ ಎಂದು ಹಿಂದೆ ನಿಗದಿ ಮಾಡಿದ್ದಾರೆ. ಈಗ ನಗರ ಪ್ರದೇಶ ಸಾಕಷ್ಟು ವಿಸ್ತರಣೆ ಆಗಿದೆ. ಹಾಗಾಗಿ ವ್ಯಾಪ್ತಿಯನ್ನು 20 ಕಿಮೀವರೆಗೆ ವಿಸ್ತರಣೆ ಮಾಡಬೇಕು ಎಂದು ಕೋರಿದರು.
ನಗರ ವ್ಯಾಪ್ತಿಯನ್ನು 10 ಕಿಮೀನಿಂದ 20 ಕಿಮೀವರೆಗೆ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್, ಸಾರಿಗೆ ಅಕಾರಿ ಗಂಗಾಧರ, ಟ್ರಾಫಿಕ್ ಇನ್ಸ್‌ಪೆಕ್ಟರ್ ಸಂತೋಷ್‌ಕುಮಾರ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!