July 12, 2026
Sunday, July 12, 2026
spot_img

ಗಾನಕೋಗಿಲೆ ಎಸ್.ಜಾನಕಿ ಅಂತಿಮಯಾತ್ರೆ: ಮೊಮ್ಮಗಳಿಂದಲೇ ಅಂತಿಮ ವಿಧಿವಿಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಸುಪ್ರಸಿದ್ಧ ಗಾಯಕಿ ಎಸ್​.ಜಾನಕಿ (88) ಅವರು ದೈವಾಧೀನರಾಗಿದ್ದು, ಅವರ ಅಂತಿಮ ಸಂಸ್ಕಾರದ ಕಾರ್ಯಗಳು ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆರವೇರಲಿವೆ. ಜಾನಕಮ್ಮ ಅವರ ಮೊಮ್ಮಗಳಾದ ಅಪ್ಸರಾ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಮಹಾಗಣ್ಯರಿಂದ ಅಂತಿಮ ದರ್ಶನ, ಬಿಗಿ ಪೊಲೀಸ್ ಭದ್ರತೆ

ಸಾರ್ವಜನಿಕರು ಹಾಗೂ ಅಭಿಮಾನಿಗಳ ದರ್ಶನಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೂರಾರು ಸಂಖ್ಯೆಯ ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸಿ, ಅಗಲಿದ ಗಾನಕೋಗಿಲೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅಂತಿಮ ದರ್ಶನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈದಾನದ ಸುತ್ತಮುತ್ತ ಸುಮಾರು 800 ಪೊಲೀಸ್ ಸಿಬ್ಬಂದಿಗಳನ್ನು ಬಿಗಿ ಭದ್ರತೆಗಾಗಿ ನಿಯೋಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !