ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತ-ಬಾಂಗ್ಲಾದೇಶ ನಡುವೆ ಏಷ್ಯಾಕಪ್ ಸೂಪರ್-4 ಹಂತದ ಕಡೆಯ ಪಂದ್ಯ ನಡೆಯಲಿದೆ.ಏಷ್ಯಾ ಕಪ್ ಟೂರ್ನಿ ಫೈನಲ್ ಹಂತ ತಲುಪಿದ್ದು, ಈಗಾಗಲೇ ಭಾರತ-ಶ್ರೀಲಂಕಾ ಫೈನಲ್ಸ್‌ನಲ್ಲಿ ಮುಖಾಮುಖಿಯಾಗುವುದು ಪಕ್ಕಾ ಆಗಿದೆ.
ನಿನ್ನೆ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ಎರಡು ವಿಕೆಟ್‌ಗಳು ಗೆಲುವು ಸಾಧಿಸಿ ಫೈನಲ್ಸ್‌ಗೆ ಲಗ್ಗೆಯಿಟ್ಟಿದೆ. ಇಂದು ನಡೆಯುವ ಪಂದ್ಯ ಉಭಯ ತಂಡಗಳಿಗೂ ಔಪಚಾರಿಕ ಪಂದ್ಯವಾಗಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಪ್ರಮುಖ ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.