ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಇಲಿಯಾನಾ (Ileana) ಮೊದಲ ಮಗುವಿನ ಬರುವಿಕೆಯ ಕಾತರದಲ್ಲಿದ್ದಾರೆ. ಆದ್ರೆ ಮದುವೆಯಾಗದೇ ತಾಯಿಯಾಗುತ್ತಿರುವ ಕಾರಣ, ಮಗುವಿನ ತಂದೆ ಯಾರೆಂಬ ಪ್ರಶ್ನೆ ಎದುರಾಗಿತ್ತು.
ಇದೀಗ ಇದಕ್ಕೆಲ್ಲಾ ನಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ತನ್ನ ಗೆಳೆಯನ ಜೊತೆಯಿರುವ ಫೋಟೋ ಹಂಚಿಕೊಂಡು, ತಾಯ್ತನದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಕೆಲ ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದ ನಟಿ ಇಲಿಯಾನ , ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಇವರು, ಇನ್ನೂ ಮದುವೆ ಆಗಿಲ್ಲ. ಆದರೂ, ತಾಯಿ ಆಗ್ತಿದ್ದೀನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಇತ್ತೀಚಿಗೆ ಅಚ್ಚರಿ ಮೂಡಿಸಿದ್ದರು.
ಇದೀಗ ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ ಎಂದು ಬರಹವನ್ನೂ ಬರೆದಿದ್ದಾರೆ. ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್ ಎಂದು ನಟಿ ಪೋಸ್ಟ್ ಮಾಡಿದ್ದರು.
ಮೊದಲ ಬಾರಿಗೆ ತನ್ನ ಸಂಗಾತಿ ಜೊತೆ ಮುಖವನ್ನು ಬಹಿರಂಗಪಡಿಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬಹಿರಂಗಪಡಿಸಲು ಅವರು ಉಂಗುರಗಳನ್ನು ತೋರಿಸಿದರು. ಈಗ ಮತ್ತೊಮ್ಮೆ ತನ್ನ ಮಗುವಿನ ತಂದೆಯೊಂದಿಗೆ ಬ್ಲರ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಗರ್ಭಿಣಿಯಾಗಿರುವುದು (Pregnancy) ನಮಗೆ ಸಿಗುವ ತುಂಬಾ ಸುಂದರವಾದ ಆಶೀರ್ವಾದ. ನಾನು ಸಾಕಷ್ಟು ಅದೃಷ್ಟಶಾಲಿ. ನನ್ನೊಳಗೆ ಒಂದು ಜೀವನ ಬೆಳೆಯುತ್ತದೆ ಎಂದು ಅರಿತುಕೊಳ್ಳುವುದೇ ಎಷ್ಟು ಸುಂದರವಾಗಿದೆ ಎಂದು ಎಮೋಷನಲ್ ಆಗಿ ನಟಿ ಬರೆದುಕೊಂಡಿದ್ದಾರೆ. ಅಂದ್ಹಾಗೆ, ನಟಿ ಕತ್ರಿನಾ ಕೈಫ್ ಸಹೋದರ ಸಭಾಸ್ಟಿನ್ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ.