ಕೊನೆಗೂ ಓಲಾ, ಉಬರ್‌ ಆಟೋ ದರ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊನೆಗೂ ರಾಜ್ಯ ಸರಕಾರ ಓಲಾ ಮತ್ತು ಉಬರ್‌ ಅಗ್ರಿಗೇಟರ್‌ ಸಂಸ್ಥೆಗಳಿಗೆ ದರ ನಿಗದಿ ಮಾಡಿದ್ದು, ಕನಿಷ್ಠ ಪ್ರಯಾಣ ದರಕ್ಕಿಂತ ಶೇ. ೫ರಷ್ಟು ಸೇವಾ ತೆರಿಗೆ ಮತ್ತು ಅದಕ್ಕೆ ಪೂರಕವಾದ ಜಿಎಸ್‌ಟಿಯನ್ನು ಸಂಗ್ರಹಿಸಲು ಅವಕಾಶ ನೀಡಿದೆ.

ಹಾಲಿ ಕನಿಷ್ಠ ದರ + 10% ಪ್ಲಾಟ್‌ಫಾರಂ ಫೀಸ್ + ಜಿಎಸ್‌ಟಿ = ನೂತನ ದರ ಈ ಮಾದರಿಯಲ್ಲಿ ಅಗ್ರಿಗೇಟರ್‌ಗಳು ದರ ವಿಧಿಸಬಹುದು ಎಂದು ಸಾರಿಗೆ ಇಲಾಖೆ ತನ್ನ ದರವನ್ನು ನಿಗದಿ ಮಾಡಿದ್ದು, ಈ ದರ ಪಟ್ಟಿಯನ್ನು ಸರಕಾರ ಕೋರ್ಟ್‌ಗೆ ಕಳುಹಿಸಬೇಕಾಗಿದೆ. ಇದಾದ ಬಳಿಕ ಹೈಕೋರ್ಟ್‌ ಅಗ್ರಿಗೇಟರ್‌ಗಳ ಅಭಿಪ್ರಾಯ ಪಡೆದು ತೀರ್ಮಾನ ಹೇಳಬೇಕಾಗಿದೆ.

ನೂತನ ದರ ನಿಗದಿ ಆದರೆ ಮೊದಲ ಎರಡು ಕಿ.ಮೀ.ಗೆ ಕನಿಷ್ಠ ದರ 2 ಕಿ.ಮೀ.ಗೆ 30ರಿಂದ 33 ರೂ.ಗೆ ಏರಿಕೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!