Wednesday, February 1, 2023

Latest Posts

ಕೊನೆಗೂ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸ್ಯಾಂಡಲ್‌ ವುಡ್‌ ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜ. ೨೯ ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಮೈಸೂರಿನ ಹೆಚ್.ಡಿ ಕೋಟೆ ಅಲ್ಲಾಳು ಗ್ರಾಮದಲ್ಲಿ‌ ಐದು ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ.ಇದರಲ್ಲಿ ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಸ್ಮಾರಕದಲ್ಲಿ ಒಳಗೊಂಡಿದೆ.

ಡಾ.ವಿಷ್ಣುವರ್ಧನ್ ಅಗಲಿದ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣವಾಗಿದೆ. 2020 ರ ಸೆ‌.15 ರಂದು ಸ್ಮಾರಕಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಮಾರಕಕ್ಕೆ ಭೂಮಿ‌ ಪೂಜೆ ನೆರವೇರಿಸಿದ್ದರು. ಸರ್ಕಾರದಿಂದ ಆಗಲೇ 11 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಇದೀಗ ವಿಷ್ಣುದಾದ ಅಭಿಮಾನಿಗಳಿಗೆ ಸಖತ್‌ ಖುಷಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!