ಹೊಸದಿಗಂತ ವರದಿ, ಮೈಸೂರು:
ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದು ಸೆರೆಯಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗ್ರಾಮದ ಸುತ್ತಮುತ್ತ ಪದೇ ಪದೇ ಕಾಣಿಸಿಕೊಂಡು ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಇದರಿಂದ ಆತಂಕಗೊoಡಿದ್ದ ಗ್ರಾಮಸ್ಥರು ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಕಿರಿಜಾಜಿ-ಮರುಗೂರು ನಡುವೆ ಇರುವ ತೋಟದಲ್ಲಿ ಇರಿಸಿದ್ದ ಬೋನಿನೊಳಗೆ ಸುಮಾರು 4 ವರ್ಷ ಪ್ರಾಯದ ಚಿರತೆ ಸೆರೆಯಾಗಿದೆ. ಬಳಿಕ ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು. ಈ ವಿಷಯ ತಿಳಿದ ಗ್ರಾಮಸ್ಥರು ಸಮಾಧಾನದ ನಿಟ್ಟಿಸಿರು ಬಿಟ್ಟರು.