ಸಾಲ ಸುಲಭವಾಗಿ ಪಡೆಯಲು ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಈ ಸ್ಕೋರ್ ಅನ್ನು ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
RBI ಕ್ರೆಡಿಟ್ ಸ್ಕೋರ್ ನಿಯಮಗಳಲ್ಲಿ ಇತ್ತೀಚೆಗೆ ಬದಲಾವಣೆ ಮಾಡಿದೆ. ಅದರಂತೆ, ಸಾಲ ನೀಡುಗರು ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಬ್ಯೂರೋ ರೆಕಾರ್ಡ್ಗಳಲ್ಲಿ ಪ್ರತೀ 15 ದಿನಗಳಿಗೊಮ್ಮೆ ಅಪ್ಡೇಟ್ ಮಾಡಬೇಕಾಗುತ್ತದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಒಂದು ತಿಂಗಳವರೆಗೆ ಕಾಯದೆ, ಪ್ರತಿ 15 ದಿನಗಳಿಗೊಮ್ಮೆ ಕ್ರೆಡಿಟ್ ಬ್ಯೂರೋಗೆ ಡೇಟಾವನ್ನು ನವೀಕರಿಸಬೇಕಾಗುತ್ತದೆ.
ನೀವು ಸಮಯಕ್ಕೆ ಸರಿಯಾಗಿ EMI ಪಾವತಿಯನ್ನು ಮಾಡಿದರೆ ಅದು 15 ದಿನದಲ್ಲಿ ನಿಮ್ಮ ಸ್ಕೋರ್ ಮೇಲೆ ಪ್ರತಿಫಲಿಸುತ್ತದೆ. ಬ್ಯಾಂಕುಗಳಿಗೆ ನಿಮ್ಮ ಹಳೆಯ ಸ್ಕೋರ್ ಬದಲು ಹೊಸ ಸ್ಕೋರ್ ಸಿಗುತ್ತದೆ. ಇದರಿಂದ ಕಡಿಮೆ ಬಡ್ಡಿದರ ಹಾಗು ಹೆಚ್ಚು ಮೊತ್ತದ ಸಾಲ ಸಿಗಲು ಸಹಾಯವಾಗುತ್ತದೆ.