ಹೊಸದಿಗಂತ ಹುಬ್ಬಳ್ಳಿ:
ಪ್ರೀಯಾಂಕ್ ಖರ್ಗೆ ಅವರು ಶಾಸಕರಾದರೂ ಸಹ ಏನು ಕೆಲಸವಿಲ್ಲ ಅನಿಸುತ್ತೆ. ಎಫ್ ಐಆರ್ ಗಳನ್ನು ಹುಡುಕಿ ಹಾಕಿಸುತ್ತಿದ್ದಾರೆ. ಸುಪ್ರೀಂ ಕೋಟ್೯ ಇವರಿಗೆ ಛೀಮಾರಿ ಹಾಕುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹರಿಹಾಯ್ದರು.
ರೈತ ಆತ್ಮಹತ್ಯೆ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಬಹುಶಃ ಸಚಿವ ಪ್ರೀಯಾಂಕ್ ಖರ್ಗೆ ಫುಲ್ ಟೈಮ್ ಇದನ್ನೆ ಕೆಲಸ ಮಾಡಿಕೊಂಡಿದ್ದಾರೆ. ಸಚಿವರು ಪ್ರಕರಣ ದಾಖಲಿಸುತ್ತಾರೆ. ಅದರ ನೋಟಿಸ್ ನನಗೆ ಬರುತ್ತದೆ. ಕೋಟ್೯ ನಲ್ಲಿ ಅದು ನಿಲ್ಲಲ್ಲ ಎಂದು ಗೊತ್ತಿದ್ದು, ಸುಮ್ಮನಿದ್ದೆ ಎಂದರು.
ಗುರುವಾರ ಜೆಪಿಸಿ ಅವರು ಹುಬ್ಬಳ್ಳಿಗೆ ಆಗಮಿಸಿ ಹಾವೇರಿ ರೈತರ ಅಹವಾಲು ಸ್ವೀಕರಿಸಿದ್ದೇವು. ಅದರಲ್ಲಿ ರೈತನ ಜಮೀನು ವಕ್ಫ ಎಂದು ಬದಲಾಯಿಸಿದ ಕಾರಣ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ.
ಆ ಬಗ್ಗೆ ಮಾಧ್ಯಮಗಳಲ್ಲೂ ಕೂಡ ವರದಿ ಬಂದಿದೆ. ರೈತನ ಕುಟುಂಬಸ್ಥರು ಮಾಧ್ಯಮದ ಎದುರು ಮಾತನಾಡಿದ್ದು ಪ್ರಸಾರ ಆಗಿದೆ. ಅದನ್ನು ನಾನು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಟ್ವೀಟ್ ಮಾಡಿದೆ ಎಂದರು.
ಆಗ ಹಾವೇರಿ ಎಸ್ಪಿ ಖಾತೆಯಿಂದ ಈ ರೀತಿ ಆಗಿಲ್ಲ ಎಂದು ಟ್ವೀಟ್ ಮಾಡಲಾಗಿದ್ದು, ನಾನು ಕಾನೂನು
ವ್ಯವಸ್ಥೆ ಗೌರವ ಇರುವುದರಿಂದ ತೆಗೆದು ಹಾಕಿದೆ ಎಂದು ತಿಳಿಸಿದ್ದಾರೆ.