April 12, 2026
Sunday, April 12, 2026
spot_img

ಆಟ ಆಡದಿದ್ರೂ ‘ಫೈನ್ ಶಿಕ್ಷೆ’: ನಿತೀಶ್ ರಾಣಾಗೆ 25% ಪೇಮೆಂಟ್ ಕಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2026ರ ಪಂದ್ಯದಲ್ಲಿ ಆಡದೇ ಇದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ನಿತೀಶ್ ರಾಣಾ ಈಗ ದೊಡ್ಡ ಸುದ್ದಿಯಾಗಿದ್ದಾರೆ. ಹೌದು! ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಅವರಿಗೆ ಪಂದ್ಯ ಶುಲ್ಕದ 25 ಶೇಕಡಾ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ ಗ್ಲೌಸ್ ಬದಲಾಯಿಸಲು ಮನವಿ ಮಾಡಿದ್ದರು. ಆದರೆ ಅಂಪೈರ್ ಅದನ್ನು ತಿರಸ್ಕರಿಸಿದ ಹಿನ್ನೆಲೆ ಡಗೌಟ್‌ನಲ್ಲಿದ್ದ ಇಂಪ್ಯಾಕ್ಟ್ ಸಬ್ ನಿತೀಶ್ ರಾಣಾ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆಸಿದರು.

ಮೈದಾನದ ಹೊರಗಿನಿಂದಲೇ ನಡೆದ ಈ ವಾಗ್ವಾದದಲ್ಲಿ ಅವರು ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂಬುದು ದೃಢಪಟ್ಟಿದ್ದು, ಇದನ್ನು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ಅಡಿಯಲ್ಲಿ ಲೆವೆಲ್-1 ಅಪರಾಧ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:

ರಾಣಾ ತಮ್ಮ ತಪ್ಪನ್ನು ಒಪ್ಪಿಕೊಂಡು ಮ್ಯಾಚ್ ರೆಫರಿಯ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ. ಇದರಂತೆ ಅವರ ಪಂದ್ಯ ಶುಲ್ಕದ 25 ಶೇಕಡಾ ಅಂದರೆ ಸುಮಾರು 7.5 ಲಕ್ಷ ದಂಡ ವಿಧಿಸಲಾಗಿದೆ.

ರಾಣಾ ಈ ಸೀಸನ್‌ಗೆ 4.20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಲೀಗ್ ಹಂತದ 14 ಪಂದ್ಯಗಳ ಲೆಕ್ಕದಲ್ಲಿ ಪ್ರತಿ ಪಂದ್ಯಕ್ಕೆ ಸುಮಾರು 30 ಲಕ್ಷ ಬರುತ್ತದೆ. ಅದರ 25 ಶೇಕಡಾ ದಂಡದ ಮೊತ್ತ 7.5 ಲಕ್ಷ ಆಗುತ್ತದೆ.

ಇದೇ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾರಣಕ್ಕೆ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಮೇಲೂ 12 ಲಕ್ಷ ದಂಡ ವಿಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !