ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ರ‍್ಯಾಪರ್ ಸಿಂಗರ್ ಬಾದ್‌ಶಾ ವಿರುದ್ಧ FIR ದಾಖಲಾಗಿದೆ.
ಅವರ ಹೊಸ ಹಾಡು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಪಂಜಾಬ್ ಪೊಲೀಸರು ರ‍್ಯಾಪರ್ ಬಾದ್‌ಶಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಬಟಾಲಾದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಾದ್‌ಶಾ ತಮ್ಮ ಹೊಸ ಹಾಡು ‘ವೆಲ್ವೆಟ್ ಫ್ಲೋ’ ನಲ್ಲಿ ‘ಚರ್ಚ್’ ಮತ್ತು ‘ಬೈಬಲ್’ ಪದಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.