Tuesday, March 21, 2023

Latest Posts

ಮಹಾರಾಷ್ಟ್ರ ಸಿಎಂ ಪುತ್ರನ ಮೇಲಿನ ಆರೋಪ : ಸಂಜಯ್ ರಾವತ್ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಪುತ್ರ ಶ್ರೀಕಾಂತ್‌ ಶಿಂದೆ ಅವರಿಂದ ಜೀವ ಬೆದರಿಕೆ ಇದೆ ಎಂದು ಆರೋಪ ಮಾಡಿದ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಮೇಲೆ ಥಾಣೆ ನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಪುರಬಾವಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 (ಎ) (ವಿವಿಧ ಗುಂಪುಗಳು, ಧರ್ಮಗಳು ಇತ್ಯಾದಿಗಳ ನಡುವೆ ಅಸಂಗತತೆಯನ್ನು ಉತ್ತೇಜಿಸುವುದು), 500 (ಮಾನನಷ್ಟ) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಜಿ ಮೇಯರ್‌ ಮೀನಾಕ್ಷಿ ಶಿಂದೆ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

‘ಲೋಕಸಭಾ ಸಂಸದ ಶ್ರೀಕಾಂತ್‌ ಶಿಂದೆ ಅವರು ನನ್ನನ್ನು ಕೊಲೆ ಮಾಡಲು ಥಾಣೆ ಮೂಲದ ಕ್ರಿಮಿನಲ್‌ ರಾಜಾ ಠಾಕೂರ್ ಅವರಿಗೆ ಸುಪಾರಿ ನೀಡಿದ್ದಾರೆ‘ ಎಂದು ಸಂಜಯ್‌ ರಾವುತ್‌ ಆರೋಪಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!