ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬೇಕರಿ: ಅಪಾರ ಹಾನಿ

ಹೊಸದಿಗಂತ ವರದಿ, ಹುಬ್ಬಳ್ಳಿ
ನಗರದ ದುರ್ಗಬೈಲ್ ಎಂ.ಜಿ. ಮಾರ್ಕೆಟ್ ರಸ್ತೆಯಲ್ಲಿನ ಬೆಲ್ಲಾರಿಗಲ್ಲಿಯಲ್ಲಿರುವ ಎಚ್.ಎಂ. ಸ್ವಿಟ್ಸ್ ಅಂಗಡಿಗೆ ಶಾಟ್೯ ಸರ್ಕಿಟ್ ನಿಂದ ಆಕಸ್ಮಿಕ ಬೆಂಕಿ‌ ತಲುಗುಲಿದ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ಹತ್ತಿದ ವೇಳೆ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಅಪಾಯಗಳು ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡಿರುವುದು ಗಮನಿಸಿದ ಅಂಗಡಿ ಮಾಲೀಕ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಘಂಟಿಕೇರಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿ ಅವಘಡದಿಂದ ವ್ಯಾಪಾಸ್ಥರು ಮತ್ತು ಸಾರ್ವಜನಿಕರಲ್ಲಿಕೆಲಹೊತ್ತು ಆತಂಕ ಸೃಷ್ಟಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!