ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕೂತನಹಳ್ಳಿಯ ಟಾಟಾ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ತಮಿಳುನಾಡಿನ ಹೊಸೂರು ಸಮೀಪದ ಕೂತನಹಳ್ಳಿಯಲ್ಲಿ ಟಾಟಾ ಕಾರ್ಖಾನೆಯ ರಾಸಾಯನಿಕ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ.
ಬೆಂಕಿ ಹೊತ್ತಿಕೊಂಡಾಗ, ಕಾರ್ಮಿಕರು ಹೊರಗೋಡಿಬಂದಿದ್ದಾರೆ. ದಟ್ಟ ಹೊಗೆಯಿಂದಾಗಿ ಹಲವಾರು ಉದ್ಯೋಗಿಗಳಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ.
ರಾಯಕೋಟೆ ಮತ್ತು ಡಂಕನಿಕೋಟೆಯ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.