ಖ್ಯಾತ ಇಂಗ್ಲಿಷ್ ಕವಿ, ಮಾಜಿ ಐಪಿಎಸ್ ಅಧಿಕಾರಿ ಕೇಕಿ ಎನ್ ದಾರುವಾಲಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಇಂಗ್ಲಿಷ್ ಕವಿ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೇಕಿ ಎನ್ ದಾರುವಾಲಾ (87) ಅವರು ದೀರ್ಘಕಾಲದ ಅನಾರೋಗ್ಯ ಮತ್ತು ನ್ಯುಮೋನಿಯಾದಿಂದ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು.

ಈ ವಿಷಯವನ್ನು ಅವರ ಪುತ್ರಿ ಅನಾಹ್ಮತಾ ಕಪಾಡಿಯಾ ಶುಕ್ರವಾರ ಪ್ರಕಟಿಸಿದ್ದಾರೆ. ಒಂದು ವರ್ಷದ ಹಿಂದೆ ಪಾರ್ಶ್ವವಾಯುವಿಗೆ ಒಳಗಾದ ಅವರು ಅಂದಿನಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರು ಮೂಲತಃ ನ್ಯುಮೋನಿಯಾದಿಂದ ನಿಧನರಾದರು ಎಂದು ಕಪಾಡಿಯಾ ತಿಳಿಸಿದ್ದಾರೆ.

ದಾರುವಾಲಾ ಅವರು ಭಾರತದ ಅತ್ಯುತ್ತಮ ಇಂಗ್ಲಿಷ್ ಬರಹಗಾರರಾಗಿ ಗಮನ ಸೆಳೆದಿದ್ದಾರೆ. ಅವರ ಕಥೆಗಳಿಗೆ ಹೆಸರುವಾಸಿಯಾದ ದಾರುವಾಲಾ ಅವರು ಇಬ್ಬರು ಹೆಣ್ಣುಮಕ್ಕಳಾದ ಅನಾಹ್ಮತಾ ಮತ್ತು ರೂನ್, ಅಳಿಯಂದಿರು ಮತ್ತು ನಾಲ್ಕು ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!