68ವರ್ಷ ಇತಿಹಾಸವಿರುವ ಹೊಟೇಲ್‌ನಲ್ಲಿ ಅಗ್ನಿ ಅವಘಡ: ಕಟ್ಟಡದಲ್ಲಿ ಸಿಲುಕಿದ 40ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್ ನಗರದ ಸುಬ್ಬಯ್ಯಗಾರಿ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಗರದ ವನಸ್ಥಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ಬಯ್ಯಗಾರಿ ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದ ವೇಳೆ 40 ಮಂದಿ ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದರು. ಬೆಂಕಿಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಿಲುಕಿದ್ದ 40 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದರು.

ಅಪಘಾತದಲ್ಲಿ ಪೀಠೋಪಕರಣಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಯಿಂದಾಗಿ ಹೋಟೆಲ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮೂರನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ 40 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ವನಸ್ಥಲಿಪುರಂ ಪೊಲೀಸರು ಮತ್ತು ಹಯತ್‌ನಗರ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೈದರಾಬಾದ್ ನಗರದಲ್ಲಿ ಲಕ್ಷಗಟ್ಟಲೆ ಹೋಟೆಲ್‌ಗಳು ಮತ್ತು ಆಹಾರ ಕೇಂದ್ರಗಳಿದ್ದರೂ, ಸುಬ್ಬಯ್ಯಗಾರಿ ಹೋಟೆಲ್ ವಿಶಿಷ್ಟವಾಗಿದೆ. ಪ್ರತಿದಿನ ಬಾಳೆ ಎಲೆಯಲ್ಲಿ ಊಟ..12ರಿಂದ 16 ಬಗೆಯ ತಿನಿಸುಗಳಿರುವ ಸಬ್ಬಯ್ಯಗಾರಿ ಹೊಟೇಲ್ ಊಟ ಅಂದ್ರೇನೆ ಫೇಮಸ್. ಹಸಿವಾಗದಿದ್ದರೂ ತಿನ್ನುವ ಆಸೆ ಹುಟ್ಟಿಸುವ ಸುವಾಸನೆ ಈ ಹೋಟೆಲ್ ನ ವಿಶೇಷತೆ. ಅದಕ್ಕಾಗಿಯೇ ಯಾವಾಗಲೂ ಜನ ಇದ್ದೇ ಇರುತ್ತಾರೆ.

ಕುಕಟ್ಪಲ್ಲಿ, ಮಲಕಪೇಟ್, ಕೊಂಡಾಪುರ, ಅಮೀರಪೇಟ್, ವನಸ್ಥಲಿಪುರಂ ಹೀಗೆ ಹಲವು ಕಡೆ ಸುಬ್ಬಯ್ಯಗಾರಿ ಹೋಟೆಲ್ ಇದೆ. 68 ವರ್ಷಗಳ ಘನ ಇತಿಹಾಸ ಹೊಂದಿರುವ ‘ಸುಬ್ಬಯ್ಯಗರಿ ಹೋಟೆಲ್’ ಎಷ್ಟು ಪ್ರಸಿದ್ಧಿ ಪಡೆದಿದೆ ಎಂಬುದು ನಗರದ ಜನತೆಗೆ ಗೊತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!