ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಪಿ ಪಾಕಿಸ್ತಾನಕ್ಕೆ ಒಂದಲ್ಲ ಎರಡಲ್ಲ ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ಒಂದ್ಕಡೆ ಭಾರತ ವಾಯು ಪಡೆ ಪಾಕ್ ನಗರಗಳನ್ನು ಧ್ವಂಸ ಮಾಡ್ತಿದ್ರೆ ಮತ್ತೊಂದೆಡೆ ಅಯ್ಯೋ ನೀರಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಭಾರತ ಇದೀಗ ಸಲಾಲ್ ಹಾಗೂ ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದೆ. ಆದ್ರೆ ಈ ವಿಚಾರದಲ್ಲಿ ಖುಷಿ ಪಡುವ ವಿಷ್ಯಕ್ಕಿಂತ ಅಪಾಯನೇ ಹೆಚ್ಚಾಗಿ ಕಾಣುತ್ತಿದೆ.
ಹೌದು, ಸಲಾಲ್ ಹಾಗೂ ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿರುವ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ. ಗುರುವಾರ ಭಾರತವು ಲಾಹೋರ್ ಮತ್ತು ಕರಾಚಿ ಸೇರಿದಂತೆ ಪಾಕಿಸ್ತಾನದ 9 ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ.
ಭಾರೀ ಮಳೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ, ನೀರನ್ನು ಬಿಡುಗಡೆ ಮಾಡಬೇಕಾಯಿತು. ಗುರುವಾರ ಸಲಾಲ್ ವಿದ್ಯುತ್ ಯೋಜನೆಯ ಮೂರು ಗೇಟ್‌ಗಳು ಮತ್ತು ಬಾಗ್ಲಿಹಾರ್ ಯೋಜನೆಯ ಎರಡು ಗೇಟ್‌ಗಳನ್ನು ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ, ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಲು ಕಳೆದ ವಾರ ಸಲಾಲ್ ಮತ್ತು ಬಾಗ್ಲಿಹಾರ್ ಯೋಜನೆಗಳ ಗೇಟ್‌ಗಳನ್ನು ಮುಚ್ಚಿದ್ದರಿಂದ ಚೆನಾಬ್ ನದಿಯಲ್ಲಿ ನೀರಿನ ಮಟ್ಟ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಇದೀಗ ಸಲಾಲ್ ಹಾಗೂ ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿರುವುದರಿಂದ ಪಾಕ್ ಗೆ ಜಲ ಪ್ರವಾಹ ಭೀತಿ ಎದುರಾಗಿದೆ.