September 29, 2026
Tuesday, September 29, 2026
spot_img

SHOCKING | ಹಂಪಿ ಉತ್ಸವದಲ್ಲಿ ಸಿಎಂ ಎಂಟ್ರಿ ವೇಳೆ ಪಟಾಕಿ ಹೊಡೆತಕ್ಕೆ ಹೊತ್ತಿದ ಬೆಂಕಿ

ಹೊಸದಿಗಂತ ವರದಿ ವಿಜಯನಗರ:

ಹಂಪಿ ಉತ್ಸವಕ್ಕೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಆಗಮಿಸಿದ ವೇಳೆ ಜಿಲ್ಲಾಡಳಿತ ಪಟಾಕಿ ಸಿಡಿಸಿದ್ದು, ಬೆಂಕಿಯ ಕಿಡಿ ಹುಲ್ಲು ಹಾಗೂ ಇತರೆ ವಸ್ತುಗಳಿಗೆ ತಗುಲಿ ಅವಘಡ ಸಂಭವಿಸಿತು.

ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವ ಹಿನ್ನೆಲೆ ಶುಕ್ರವಾರ ರಾತ್ರಿ 8.05 ಕ್ಕೆ ವೇದಿಕೆಗೆ ಆಗಮಿಸಿದರು. ಈ ವೇಳೆ ವೇದಿಕೆಯ ಅನತಿ ದೂರದಲ್ಲಿ ಪಟಾಕಿ ಸಿಡಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಧಗ ಧಗನೇ ಬೆಂಕಿ ಹೊತ್ತಿ ಉರಿಯಲಾರಂಭಿಸಿತು. ಕೆಲಕ್ಷಣ ಜನರು ಆತಂಕಕ್ಕೆ ಒಳಗಾದರು.

ಬೆಂಕಿಯ ಕಿನ್ನಾಲೆ ಹೊತ್ತು ಉರಿದಿದ್ದು, ತಕ್ಷಣವೇ ಅಗ್ನಿ ಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಲಾಯಿತು.

Must Read