ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರಿಷಸ್ನಲ್ಲಿ ಶಿರಾತ್ರಿಗೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಪೂಜೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.
ದೇವರ ವಿಗ್ರಹವು ವಿದ್ಯುತ್ ತಂತಿಗೆ ಸ್ಪರ್ಶಿಸಿ ಬೆಂಕಿ ತಗುಲಿದೆ. ನಂತರ ಬೆಂಕಿ ಎಲ್ಲೆಡೆ ಆವರಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮಾರ್ಚ್8 ರಂದು ಆಫ್ರಿಕಾದ ಮಾರಿಷಸ್ನ ಹಿಂದೂ ಸಂಪ್ರದಾಯ ಶಿವರಾತ್ರಿಯನ್ನು ಆಚರಣೆ ಮಾಡುತ್ತದೆ. ಇದಕ್ಕೂ ಮುನ್ನ ಪೂಜೆ ಮಾಡಲಾಗುತ್ತಿತ್ತು.