ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ ಪರಿಣಾಮ ಸುಮಾರು ೧ ಲಕ್ಷ ರೂಪಾಯಿ ಕಬ್ಬಿನ ಬೆಳೆ ಸುಟ್ಟು ಹಾನಿಯಾಗಿದೆ.
ನಂದಿಕಟ್ಟಾ ಗ್ರಾಮದ ಶಿದ್ಧಲಿಂಗಪ್ಪ .ಎಸ್. ಖಾತೆದಾರ್ ಎಂಬುವರ ಸರ್ವೇ ನಂಬರ 168 ರಲ್ಲಿರುವ ಗದ್ದೆಗೆ ಬೆಂಕಿ ತಗುಲಿ ಹಾನಿಯಾಗಿದೆ.
ರವಿವಾರ ಸಾಯಂಕಾಲದ ಸಮಯದಲ್ಲಿ ಗದ್ದೆಯ ಮೇಲ್ಬಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದೆ. ಗದ್ದೆಯ ಮಾಲೀಕ ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಮುಂದಾದರು ಹತೋಟಿಗೆ ಬಾರದೆ ಕಬ್ಬಿನ ಗದ್ದೆಗೆ ಹತ್ತಿದ ಬೆಂಕಿಯಿಂದ ಸುಮಾರು ೧ ಲಕ್ಷ ರೂಪಾಯಿ ಬೆಳೆ ಸುಟ್ಟು ಹಾನಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಠಾಣೆಯವರು ಆಗಮಿಸಿ ಬೆಂಕಿಯಿಂದ ೧ ಲಕ್ಷಕ್ಕಿಂತ ಹೆಚ್ಚು ಕಬ್ಬಿನ ಬೆಳೆಯನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಸಂತೋಷ್ ಪಾಟೀಲ್, ಬಸವರಾಜ ಇಂಚಲ್, ಚಂದ್ರಪ್ಪ ಲಮಾಣಿ, ರಾಜೇಶ್ ಸವಣೂರು ವಿಷ್ಣು ಗುಲ್ಯಾಣವರ ಪಾಲ್ಗೊಂಡಿದ್ದರು.