ಎಂಜಿನ್ ನಲ್ಲಿ ಬೆಂಕಿ: ಧಗಧಗ ಉರಿದ ಲಾರಿ

ಹೊಸದಿಗಂತ ವರದಿ, ವಿಜಯಪುರ:

ಆಕಸ್ಮಿಕವಾಗಿ ಲಾರಿ ಎಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡು ಲಾರಿ ಧಗಧಗ ಉರಿದ ಘಟನೆ ಜಿಲ್ಲೆಯ ಝಳಕಿ ಸಮೀಪದ ಎಚ್ ಪಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ಗುಜರಾತ್ ನಿಂದ ಫೈಬರ್ ಕೇಬಲ್ ತುಂಬಿಕೊಂಡು ಹೊರಟಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಲಾರಿಯಿಂದ ಚಾಲಕ ಹಾಗೂ ಕ್ಲೀನರ್ ಕೆಳಗಿಳಿದಿದ್ದಾರೆ.

ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆ, ಲಾರಿ ಸಂಪೂರ್ಣ ಸುಟ್ಟು ‌ಭಸ್ಮವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!