ಚಿಕ್ಕಮಗಳೂರಿನ ಕರ್ಣಾಟಕ ಬ್ಯಾಂಕ್‌ ಎಟಿಎಂನಲ್ಲಿ ಅಗ್ನಿ ಅವಘಡ: ಐದು ಲಕ್ಷ ರೂಪಾಯಿ ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿಕ್ಕಮಗಳೂರಿನಲ್ಲಿ ಕರ್ಣಾಟಕ ಎಟಿಎಂನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ ಐದು ಲಕ್ಷ ರೂಪಾಯಿ ಭಸ್ಮವಾಗಿದೆ.

ಐಜಿ ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ನಾಟಕ ಬ್ಯಾಂಕ್​ನ ಶಾಖೆಯ ಕೆಳಭಾಗದಲ್ಲಿರುವ ಎಟಿಎಂಗೆ ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಭಸ್ಮವಾಗಿದೆ.

ಶಾರ್ಟ್ ಸರ್ಕ್ಯೂಟ್​ನಿಂದ ಎಟಿಎಂಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!