ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶವಂತಪುರ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಎರಡು ಕಂಟೇನರ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ.
ಪ್ಲಾಟ್‌ಫಾರ್ಮ್ ಆರರಲ್ಲಿ ನಿಂತಿದ್ದ ಒಂದು ಬೋಗಿಯಲ್ಲಿ ಕ್ಯಾಂಟೀನ್ ನಡೆಸಲಾಗಿತ್ತು ಹಾಗೂ ಇನ್ನೊಂದು ಬೋಗಿಯಲ್ಲಿ ಕ್ಯಾಂಟೀನ್ ನಡೆಸಲು ಬೇಕಾದ ಪದಾರ್ಥಗಳನ್ನು ಇಡಲಾಗಿತ್ತು.
ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಆಗಮಿಸಿವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.