ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನ ಇಂದೂರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆ ಹಾಗೂ ಗೋವಿನ ಜೋಳದ ಸಪ್ಪೆಯ ಬಣವೆ ಸುಟ್ಟು ಭಸ್ಮವಾಗಿದ್ದು ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇಂದೂರ ಗ್ರಾಮದ ಎಸ್.ಎನ್.ರಾಯ್ಕರ ಎಂಬುವರ ಎರಡುವರೆ ಎಕರೆಯಲ್ಲಿ ಬೆಳೆದ ಭತ್ತದ ಹುಲ್ಲಿನ ಬಣವೆ ಹಾಗೂ ದ್ಯಾಮಣ್ಣ ಹರಿಜನ ಎಂಬ ರೈತರ ಆರೂ ಎಕರೆ ಗದ್ದೆಯಲ್ಲಿ ಬೆಳೆದ ಭತ್ತದ ಹುಲ್ಲು ಹಾಗೂ ಗೋವಿನ ಜೋಳದ ಸಪ್ಪೆಯು ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿದೆ.
ಹೊಲದಲ್ಲಿರುವ ಭತ್ತದ ಹುಲ್ಲಿನ ಬಣವೆಗೆ ಹಾಗೂ ಗೋವಿನ ಜೋಳದ ಸಪ್ಪೆಯ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದೆ. ವಿಷಯ ತಿಳಿದ ಮಾಲೀಕರು ಹಾಗೂ ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಮುಂದಾದರು ಬೆಂಕಿ ಹತೋಟಿಗೆ ಬಾರದೆ ಸುಟ್ಟು ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸುವಷ್ಟರಲ್ಲಿ ಭತ್ತದ ಬಣವೆ ಹಾಗೂ ಗೋವಿನ ಜೋಳದ ಸಪ್ಪೆಯ ಬಣವೆ ಸುಟ್ಟು ಹಾನಿಯಾಗಿದೆ ಎಂದು ಸ್ಥಳಿಯ ರೈತ ಧರ್ಮರಾಜ ನಡಗೇರಿ ತಿಳಿಸಿದ್ದಾರೆ.
ಸ್ಥಳಕ್ಕೆ ಕೃಷಿ ಅಧಿಕಾರಿ ಕುಲಕರ್ಣಿ ಭೇಟಿ ನಿಡಿದ್ದರು.