ಪಟಾಕಿ ಸಿಡಿಸುತ್ತಾ ಕಾರು ಚಲಾಯಿಸಿದ ವ್ಯಕ್ತಿಗೆ ಬಿತ್ತು ಕೇಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾರಿನ ಮೇಲೆ ಪಟಾಕಿಯನ್ನು ಸಿಡಿಸುತ್ತಾ ಕಾರು ಚಲಾಯಿಸಿದ ವ್ಯಕ್ತಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲ ವಿಪಿ ನಗರದ ಸೆಲೂನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶಾಲ್ ಕೊಹ್ಲಿ (26) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಅ. 25 ರಂದು ರಾತ್ರಿ 9.30 ರ ವೇಳೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಡಾ.ವಿ.ಎಸ್ ಆಚಾರ್ಯ ರಸ್ತೆಯಲ್ಲಿ ಕಾರು ನಂಬ್ರ ಕೆ.ಎ20 9232 ರಲ್ಲಿ ವಿಶಾಲ್ ಕಾರನ್ನು ನಿರ್ಲಕ್ಷ್ಯತನ, ಅಜಾಗರೂಕತೆ ಹಾಗೂ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಕಾರಿನ ಮೇಲ್ಭಾಗದಲ್ಲಿ ಪಟಾಕಿ ಇಟ್ಟು ಸಿಡಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಕೃತ್ಯದಲ್ಲಿ ಭಾಗಿಯಾದ ಆರೋಪಿ ಮತ್ತು ವಾಹನ ಪತ್ತೆಗೆ ಅಕ್ಷಯ್ ಎಂ ಹಾಕೆ ಎಸ್ಪಿ ಉಡುಪಿ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪಿ.ಎಸ್.ಐ ರಾಜಶೇಖರ ವಂದಲಿ, ಎ.ಎಸ್.ಐ ಶೈಲೇಶ್ ಹಾಗೂ ಹೆಡ್ ಕಾನ್ ಸ್ಟೇಬಲ್ ಪ್ರಸನ್ನ ಅ. 27ರಂದು ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!