ಹೊಸದಿಗಂತ ವರದಿ,ಹಾವೇರಿ:
ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪಟಾಕಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಬಿಜೆಪಿ ಪಕ್ಷ ಘೋಷಿಸಿದಂತೆ ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ವಿತರಿಸಿದರು.
ಇತ್ತೀಚೆಗೆ ನಡೆದ ಪಟಾಕಿ ದುರಂತದಲ್ಲಿ ಅನಾಹುತ ಆಗಿದೆ. ದಸರಾ- ದೀಪಾವಳಿ ಹಬ್ಬಕ್ಕೆ ಸ್ಟಾಕ್ ಮಾಡಿರುವ ಪಟಾಕಿ ಸ್ಪೋಟವಾಗಿದೆ. ಇದರಲ್ಲಿ ನಾಲ್ವರ ಸಾವಾಗಿದ್ದು ದುರ್ದೈವದ ಸಂಗತಿ. ಇಷ್ಟೊಂದು ದೊಡ್ಡ ಪ್ರಮಾಣದ ಪಟಾಕಿ ಸಂಗ್ರಹ ಮಾಡಿದ್ದು ತಪ್ಪು. ಮುಂಜಾಗ್ರತಾ ಮಾರ್ಗಗಳನ್ನು ಇಟ್ಟಿರಬೇಕು, ಆದರೆ ಯಾವುದು ಮುಂಜಾಗ್ರತ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ. ಮೆಲ್ನೋಟಕ್ಕೆ ಹಲವಾರು ಲೋಪಗಳು ಕಾಣಿಸುತ್ತಿವೆ. ಜಿಲ್ಲಾಧಿಕಾರಿಗಳು ಬಿಗಿಯಾದ ನಿಯಮಗಳನ್ನು ಜಾರಿಗೊಳಿಸಬೇಕು. ಕಠಿಣ ಕ್ರಮ ತೆಗೆದುಕೊಳ್ಳದೆ ಹೋದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಇಂತಹ ಘಟನೆಗಳಲ್ಲಿ ಗಾಯಕ್ಕಿಂತ ಸಾವುಗಳೆ ಹೆಚ್ಚಾಗುತ್ತವೆ. ಈ ದುರಂತ ನಡೆದಾಗ ಮೃತರ ಕುಟುಂಬಗಳಿಗೆ ತಲಾ ಒಂದೊಂದು ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದೇವು, ಅದರಂತೆ ಇಂದು ಪಕ್ಷದಿಂದ ಪರಿಹಾರ ನೀಡಿದ್ದೇವೆ ಎಂದು ಹೇಳಿದರು.