ಥಾಯ್ಲೆಂಡ್‌ನ ಪಟಾಕಿ ಗೋದಾಮಿನಲ್ಲಿ ಸ್ಫೋಟ: 10 ಮಂದಿ ಸಾವು, 118 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಥಾಯ್ಲೆಂಡ್‌ನ ನರಾಥಿವಾಸ್ ಪ್ರಾಂತ್ಯದ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಥಿವಾಸ್ ಪ್ರಾಂತ್ಯದ ಗವರ್ನರ್ ಸನನ್ ಪೊಂಗಕ್ಸೋರ್ನ್ ಮಾಹಿತಿಯಂತೆ ಘಟನೆಯಲ್ಲಿ 118 ಜನ ಗಾಯಗೊಂಡಿದ್ದಾರೆ. ಸುಮಾರು 500 ರಿಂದ 800 ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೊ ಹರಿದಾಡುತ್ತಿದ್ದು, ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅನೇಕ ಕಟ್ಟಡಗಳು, ವಾಹನ ಹಾಗೂ ರಸ್ತೆಗಳು ಹಾನಿಯಾಗಿರುವುದು. ಗೋದಾಮು ಸುತ್ತಮುತ್ತಲಿನ ನೂರಾರು ಮನೆಗಳಿಗೆ ಹಾನಿಯಾಗಿರುವುದು ಕಂಡು ಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!