ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವೀಟರ್ ಮಾಲೀಕತ್ವ ವಹಿಸಿಕೊಂಡ ಮೂರೇ ವಾರಗಳಲ್ಲಿ 7,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊರಹಾಕಿದ ಎಲಾನ್ ಮಸ್ಕ್, ಇದೀಗ ಟ್ವೀಟರ್ ನಲ್ಲಿ ವಜಾಗೊಳಿಸುವಿಕೆ ಮುಗಿದಿದೆ, ಇನ್ನು ನೇಮಕಾತಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಉದ್ಯೋಗಿಗಳೊಂದಿಗಿನ ಸಭೆಯಲ್ಲಿ, ಟ್ವಿಟರ್ ಈಗ ಇಂಜಿನಿಯರಿಂಗ್ ಮತ್ತು ಮಾರಾಟದ ಸ್ಥಾನಗಳಿಗೆ ಸಕ್ರಿಯವಾಗಿ ನೇಮಕ ಮಾಡಿಕೊಳ್ಳುತ್ತಿದೆ ಎಂದು ಮಸ್ಕ್ ಹೇಳಿದ್ದಾರೆ ಎಂದು ದಿ ವರ್ಜ್ ವರದಿ ಮಾಡಿದೆ.
ಸಂಭಾವ್ಯ ಅಭ್ಯರ್ಥಿಗಳನ್ನು ಶಿಫಾರಸು ಮಾಡುವಂತೆ ಅವರು ಸಿಬ್ಬಂದಿಯನ್ನು ಕೇಳಿದ್ದಾರೆ ಎನ್ನಲಾಗಿದೆ. ಆದರೆ ನಿರ್ದಿಷ್ಟವಾಗಿ ಯಾವ ಸ್ಥಾನಕ್ಕೆ ಕಂಪನಿ ಎದುರು ನೋಡುತ್ತಿದೆ ಎಂದು ಮಸ್ಕ್ ಬಹಿರಂಗಪಡಿಸಿಲ್ಲ.
“ನಿರ್ಣಾಯಕ ನೇಮಕಾತಿಗಳ ವಿಷಯದಲ್ಲಿ, ಸಾಫ್ಟ್ವೇರ್ ಬರೆಯುವಲ್ಲಿ ಶ್ರೇಷ್ಠರಾಗಿರುವ ಜನರಿಗೆ ಹೆಚ್ಚಿನ ಆದ್ಯತೆ ಎಂದು ನಾನು ಹೇಳುತ್ತೇನೆ” ಎಂದು ಮಸ್ಕ್ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.