ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮೀನುಗಾರರ ಮೀನುಗಾರಿಕಾ ದೋಣಿಯ ಮೇಲೆ ಶ್ರೀಲಂಕಾ ನೌಕಾಪಡೆಯು ಗುಂಡು ಹಾರಿಸಿ 5 ಮಂದಿ ಗಾಯಗೊಂಡಿದ್ದಾರೆ.
ಈ ಹಿನ್ನೆಲೆಭಾರತ ಇಂದು ದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್‌ಗೆ ಸಮನ್ಸ್ ಜಾರಿ ಮಾಡಿದೆ.
ಮೀನುಗಾರರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾಗ ಶ್ರೀಲಂಕಾ ನೌಕಾಪಡೆ ಗುಂಡು ಹಾರಿಸಿತ್ತು. ಡೆಫ್ಟ್ ದ್ವೀಪದ ಬಳಿ ಶ್ರೀಲಂಕಾ ನೌಕಾಪಡೆಯ ಗುಂಡಿನ ದಾಳಿಯಲ್ಲಿ ಐವರು ಭಾರತೀಯ ಮೀನುಗಾರರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಾರತವು ಶ್ರೀಲಂಕಾ ನೌಕಾಪಡೆಯನ್ನು ಖಂಡಿಸಿದೆ. ಭಾರತ ಶ್ರೀಲಂಕಾ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ 13 ಭಾರತೀಯ ಮೀನುಗಾರರನ್ನು ಬಂಧಿಸಿದಾಗ ಶ್ರೀಲಂಕಾ ನೌಕಾಪಡೆಯಿಂದ ಗುಂಡು ಹಾರಿಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಮೀನುಗಾರಿಕಾ ದೋಣಿಯಲ್ಲಿದ್ದ 13 ಮೀನುಗಾರರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಜಾಫ್ನಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರಿಂದ ಗಾಯಗೊಂಡ ಮೀನುಗಾರರಿಗೆ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇತರ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.