ಐಪಿಎಲ್​​ನ ಮೆಗಾ ಹರಾಜಿನಲ್ಲಿ ಮೊದಲ ಖರೀದಿ: ಸ್ಟಾರ್​ ಪ್ಲೇಯರ್ ಗೆ ಮಣೆ ಹಾಕಿದ ಆರ್​​ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಐಪಿಎಲ್​​ನ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್, ಚಹಾಲ್, ರಿಷಬ್ ಪಂತ್, ಅರ್ಷ್​​ದೀಪ್ ಸಿಂಗ್ ಸೇರಿದಂತೆ ಆಟಗಾರರು ನಿರೀಕ್ಷೆಗೂ ಮೀರಿ ಹಣವನ್ನು ಜೇಬಿಗೆ ಇಳಿಸಿದ್ದಾರೆ. ಅದರಂತೆ ವಿದೇಶಿ ಪ್ಲೇಯರ್ ಮೇಲೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​​ಸಿಬಿ) ತಂಡ ಕೋಟಿ ಕೋಟಿ ಹಣ ಸುರಿದು ಖರೀದಿ ಮಾಡಿದೆ.

ಲಿವಿಂಗ್​​ಸ್ಟನ್ ಅವರನ್ನು 8.75 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದೆ. ಇಂಗ್ಲೆಂಡ್ ಕ್ರಿಕೆಟರ್ ಆಗಿರುವ ಲಿವಿಂಗ್​​ಸ್ಟನ್ ಹೊಡಿ ಬಡಿ ಆಟಕ್ಕೆ ಖ್ಯಾತಿ ಪಡೆದ ಆಟಗಾರ. ಆಲ್​​ರೌಂಡರ್ ಆಗಿರುವ ಲಿಯಾಮ್ ಲಿವಿಂಗ್​​ಸ್ಟನ್ ತಂಡಕ್ಕೆ ಕೊಡುಗೆ ನೀಡುವುದಂತೂ ಗ್ಯಾರಂಟಿ. ಹೀಗಾಗಿಯೇ ಮೆಗಾ ಆಕ್ಷನ್​ನಲ್ಲಿ ಆರ್​ಸಿಬಿ ಮಣೆ ಹಾಕಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!