ದಿವಾಳಿಯಾಗಿರೋ ಸಿಲಿಕಾನ್‌ವ್ಯಾಲೀ ಬ್ಯಾಂಕ್‌ ಖರೀದಿಗೆ ಮುಂದೆ ಬಂದ ಫಸ್ಟ್‌ ಸಿಟಿಜನ್ಸ್‌ ಇಂಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಿವಾಳಿಯಾಗಿರೋ ಅಮೆರಿಕದ ಸಿಲಿಕಾನ್‌ ವ್ಯಾಲೀ ಬ್ಯಾಂಕನ್ನು ಸ್ವಾಧೀನ ಪಡಿಸಿಕೊಳ್ಳಲು ಫಸ್ಟ್ ಸಿಟಿಜನ್ಸ್ ಬ್ಯಾಂಕ್‌ಶೇರ್ಸ್ ಇಂಕ್ ಮುಂದೆ ಬಂದಿದ್ದು ಈ ಕುರಿತು ಮಾತುಕತೆ ನಡೆಸುತ್ತಿದೆ. ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ನಿಂದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಫಸ್ಟ್‌ ಸಿಟಿಜನ್ಸ್‌ ಇಂಕ್‌ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿದೆ.

ಫಸ್ಟ್‌ ಸಿಟಿಜನ್ಸ್ ಸುಮಾರು 109 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿದೆ ಮತ್ತು ಒಟ್ಟು 89.4 ಶತಕೋಟಿ ಡಾಲರ್ ಠೇವಣಿಗಳನ್ನು ಹೊಂದಿದೆ.

ಕಳೆದ ಎರಡು ವಾರಾಂತ್ಯಗಳಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಜೊತೆಗೆ ಎಸ್‌ವಿಬಿ ಪ್ರೈವೇಟ್ ಅನ್ನು ಮಾರಾಟ ಮಾಡಲು ಎಫ್‌ಡಿಐಸಿ ಪ್ರಯತ್ನಿಸಿದೆ ಆದರೆ ಅದು ಎರಡನ್ನೂ ಒಟ್ಟಿಗೆ ಮಾರಾಟ ಮಾಡಲು ವಿಫಲವಾಗಿದೆ. ಹೀಗಾಗಿ ಎರಡನ್ನೂ ಪ್ರತ್ಯೇಕವಾಗಿ ಮಾರಾಟ ಮಾಡಲು ಯತ್ನಿಸುತ್ತಿದೆ. ಶನಿವಾರದ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ವ್ಯಾಲಿ ನ್ಯಾಷನಲ್ ಬ್ಯಾನ್‌ಕಾರ್ಪ್ ಸಹ ಸಿಲಿಕಾನ್ ವ್ಯಾಲಿ ಬ್ಯಾಂಕ್‌ಗೆ ಖರೀದಿಗೆ ಬಿಡ್‌ದಾರನಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!