ಮೊದಲ ದಿನವೇ 75 ಕೋಟಿ ಕಲೆಕ್ಷನ್ ಪಡೆದ ‘ಬ್ರಹ್ಮಾಸ್ತ್ರ’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬ್ರಹ್ಮಾಸ್ತ್ರ ಸಿನಿಮಾ ತನ್ನ ಮೊದಲ ದಿನದಂದು ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್ ಜೊತೆಯಾಗಿ ನಟಿಸಿರುವ ‘ಬ್ರಹ್ಮಾಸ್ತ್ರ’ ಶುಕ್ರವಾರ ವಿಶ್ವಾದ್ಯಂತ 8,913 ಸ್ಕ್ರೀನ್​​​ಗಳಲ್ಲಿ ಬಿಡುಗಡೆ ಆಗಿದೆ. ಬಹಿಷ್ಕಾರದ ಬಿಸಿ, ಸೌತ್​ ಸಿನಿಮಾ ಇಂಡಸ್ಟ್ರಿಯ ಅಬ್ಬರ, ನಟ-ನಟಿಯ ವಿವಾದಾತ್ಮಕ ಹೇಳಿಕೆ ಎಫೆಕ್ಟ್​​ ಚಿಂತೆಯ ನಡುವೆಯೇ ಸಿನಿಮಾ ರಿಲೀಸ್ ಆಗಿ ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್​ ಮಾಡಿದೆ.

ಬ್ರಹ್ಮಾಸ್ತ್ರ ಸಿನಿಮಾ ತನ್ನ ಮೊದಲ ದಿನದಂದು ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ. ಜೂನಿಯರ್​ ಎನ್​​ಟಿಆರ್​ ಹಾಗೂ ರಾಮ್​ ಚರಣ್​ ಅಭಿನಯದ ಆರ್​​ಆರ್​ಆರ್​ ಸಿನಿಮಾ ಮೊದಲ ದಿನ 20 ಕೋಟಿ ಗಳಿಕೆ ಮಾಡಿತ್ತು. ಸ್ವತಃ ರಣ್​ಬೀರ್​ ಕಪೂರ್​ ಅಭಿನಯದ ಸಂಜು ಚಿತ್ರ 34.75 ಕೋಟಿ ಗಳಿಸಿತ್ತು. ಇದೀಗ ಬ್ರಹ್ಮಾಸ್ತ್ರ 75 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ತಳ್ಳಿದೆ.
ಚಿತ್ರ ನಿರ್ಮಾಣಕ್ಕೆ ಒಂಬತ್ತು ವರ್ಷಗಳ ಸುದೀರ್ಘ ಸಮಯ ತೆಗೆದುಕೊಳ್ಳಲಾಗಿದ್ದು, 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರೊಡಕ್ಷನ್ ಬ್ಯಾನರ್‌ಗಳಾದ ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!