ಇಂದಿನಿಂದ ಮೊಟ್ಟ ಮೊದಲ ಮೇಡ್‌ ಇನ್‌ ಇಂಡಿಯಾ ವಾಣಿಜ್ಯ ವಿಮಾನ ಹಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಮೊದಲ “ಮೇಡ್ ಇನ್ ಇಂಡಿಯಾ” ಸಿವಿಲ್ ಡೋರ್ನಿಯರ್ ವಾಣಿಜ್ಯ ವಿಮಾನವು ಏಪ್ರಿಲ್ 12 (ಮಂಗಳವಾರ) ತನ್ನ ಹಾರಾಟವನ್ನು ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ದೂರದ ನಗರ ಪ್ರದೇಶಗಳಿಗೆ ವಾಯು ಸಂಪರ್ಕವನ್ನು ಒದಗಿಸುತ್ತದೆ. ಭಾರತೀಯ ವಾಯುಯಾನ ಇತಿಹಾಸದಲ್ಲಿ ಇದನ್ನು ರೆಡ್ ಲೆಟರ್ ಡೇ ಎಂದು ಬಣ್ಣಿಸುತ್ತಾ, ಈಶಾನ್ಯ ರಾಜ್ಯಗಳ ಉಳಿದ ಭಾಗಗಳಿಗೆಇನ್ನಷ್ಟು ವಿಮಾನ ಸಂಪರ್ಕ ಕಲ್ಪಿಸುವ ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ಮೊದಲ “ಮೇಡ್ ಇನ್ ಇಂಡಿಯಾ” 17 ಆಸನಗಳ ಡಾರ್ನಿಯರ್ ವಿಮಾನವು ಅರುಣಾಚಲ ಪ್ರದೇಶದ 5 ದೂರದ ಪಟ್ಟಣಗಳಿಗೆ ತೆರಳುವ ಮೂಲಕ ತನ್ನ ಮೊದಲ ಸೇವೆಯನ್ನು ಪೂರ್ಣಗೊಳಿಸಲಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈಶಾನ್ಯ ರಾಜ್ಯಗಳಲ್ಲಿ ವಾಯು ಸಂಪರ್ಕವನ್ನು ಉತ್ತೇಜಿಸಲು ಮತ್ತು ವಾಯು ಸಂಪರ್ಕಕ್ಕಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಎನ್‌ಇಆರ್‌ ಎಂಬ ಯೋಜನೆಯನ್ನು ಅನುಮೋದಿಸಿದೆ.

ಈ ಯೋಜನೆಯ ಭಾಗವಾಗಿ, ನಾಗರಿಕ ವಿಮಾನಯಾನ ಸಚಿವಾಲಯ ಈಶಾನ್ಯ ಪ್ರದೇಶದಲ್ಲಿ ವಾಯು ಸಂಪರ್ಕ ಮತ್ತು ವಾಯುಯಾನ ಮೂಲಸೌಕರ್ಯಕ್ಕೆ ಅನುಮೋದನೆ ನೀಡಿದೆ. ಭಾರತದಲ್ಲಿ ತಯಾರಿಸಿದ ವಿಮಾನಗಳನ್ನು ನಿರ್ವಹಿಸುವ ಹಾಗೂ ಭಾರತದ ಮೊದಲ ವಾಣಿಜ್ಯ ವಿಮಾನಯಾನ ಸಂಸ್ಥೆಯಾಗಿದೆ. ಎರಡೂ ಕಾರ್ಯಕ್ರಮಗಳಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪಾಲ್ಗೊಳ್ಳಲಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಪೇಮಾ ಖಂಡು ಉಪಸ್ಥಿತಿಯಲ್ಲಿ ನಡೆಯಲಿದೆ.

ಎಚ್‌ಎಎಲ್ ಮೂಲಗಳ ಪ್ರಕಾರ, ಎಸಿ ಕ್ಯಾಬಿನ್‌ನೊಂದಿಗೆ 17 ಆಸನಗಳ ಒತ್ತಡ ರಹಿತ ಡೋರ್ನಿಯರ್ 228 ಹಗಲು ಮತ್ತು ರಾತ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಲಘು ಸಾರಿಗೆ ವಿಮಾನವು ಈಶಾನ್ಯ ರಾಜ್ಯಗಳಲ್ಲಿ ಪ್ರಾದೇಶಿಕ ಸಂಪರ್ಕವನ್ನು ಸುಗಮಗೊಳಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!