ಕಾಮನ್​ವೆಲ್ತ್ ನಲ್ಲಿ ಪಾಕ್​ಗೆ ಸಿಕ್ತು ಮೊದಲ ಚಿನ್ನ: ಈ ಗೆಲುವಿಗೆ ಮೀರಾಬಾಯಿ ಚಾನು ಪ್ರೇರಣೆ ಎಂದ ಮುಹಮ್ಮದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಮನ್​ವೆಲ್ತ್ ಗೇಮ್ಸ್​ನಲ್ಲಿಂದು ಪುರುಷರ 109 ಕೆಜಿ ವೇಟ್ ಲಿಫ್ಟಿಂಗ್​ ವಿಭಾಗದಲ್ಲಿ 405 ಕೆಜಿ ಭಾರ ಎತ್ತುವ ಮೂಲಕ ಪಾಕಿಸ್ತಾನದ ಮುಹಮ್ಮದ್ ನೂಹ್ ಭಟ್​ ಚೊಚ್ಚಲ ಚಿನ್ನ ಗೆದ್ದರು.

ಇನ್ನು ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 24 ವರ್ಷದ ಈ ಕ್ರೀಡಾಳುವಿಗೆ ಭಾರತದ ವೇಟ್ ಲಿಫ್ಟರ್ ಮೀರಾಬಾನು ಚಾನು ಪ್ರೇರಣೆ.
‘ಕಳೆದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಮೀರಾ ಬಾಯಿ ಬೆಳ್ಳಿ ಗೆದ್ದಿದ್ದು ನನ್ನಲ್ಲಿ ಹೆಮ್ಮೆ ಉಂಟು ಮಾಡಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಬರುವ ನಾವೂ ಸಹ ಪದಕ ಗೆಲ್ಲಬಲ್ಲೆವು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದರು.

2015ರಲ್ಲಿ ಪುಣೆಯಲ್ಲಿ ನಡೆದ ಯೂತ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗಿಯಾಗಿರುವುದನ್ನು ಮೆಲುಕು ಹಾಕಿದ ಮುಹಮ್ಮದ್, 2016ರಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ಸೌತ್ ಏಷ್ಯನ್​ ಗೇಮ್ಸ್​​ ಬಗ್ಗೆಯೂ ಮಾತನಾಡಿದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ಅಪಾರ ಪ್ರೀತಿ ಹಾಗೂ ಬೆಂಬಲ ಸಿಕ್ಕಿದೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿರುವ ಅಭಿಮಾನಿಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳು ನನಗೆ ಭಾರತದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 109 ಕೆಜಿ ವೇಟ್ ಲಿಫ್ಟಿಂಗ್​ ವಿಭಾಗದಲ್ಲಿ ಭಾರತದ ಗುರುದೀಪ್​ ಸಿಂಗ್​ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಈ ಸಂದರ್ಭದಲ್ಲಿ ಪಾಕ್​ ಅಥ್ಲೀಟ್ಸ್ ಜೊತೆಗೂ ಕೆಲ ಹೊತ್ತು ಅವರು ಮಾತುಕತೆ ನಡೆಸಿದರು.

‘ನಾನು ಹಾಗು ವೇಟ್ ಲಿಫ್ಟರ್​ ಗುರ್ದೀಪ್ ಸಿಂಗ್ ಒಳ್ಳೆಯ ಸ್ನೇಹಿತರು. ಕಳೆದ 7-8 ವರ್ಷಗಳಿಂದ ನಮ್ಮ ನಡುವೆ ಉತ್ತಮ ಆತ್ಮೀಯತೆ ಇದೆ. ವಿದೇಶದಲ್ಲಿ ಇಬ್ಬರೂ ಒಟ್ಟಿಗೆ ತರಬೇತಿ ಸಹ ಪಡೆದುಕೊಂಡಿದ್ದೇವೆ. ಕಾಮನ್​ವೆಲ್ತ್​ನಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳಾಗಿದ್ದೇವೆ. ಇದೊಂದು ವೈಯಕ್ತಿಕ ಸಾಮರ್ಥ್ಯದ ಸ್ಪರ್ಧೆ ಮಾತ್ರ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!