GGW vs RCB: ಮಹಿಳಾ ಪ್ರೀಮಿಯರ್​​ಲೀಗ್​ನಲ್ಲಿ ಮೊದಲ ಪಂದ್ಯ, ಆರ್‌ಸಿಬಿ ಮ್ಯಾಚ್‌ ಎಷ್ಟೊತ್ತಿಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2025ನೇ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯ ಇಂದು (ಫೆಬ್ರವರಿ 14) ನಡೆಯಲಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜಿಯಂಟ್ಸ್ ವುಮನ್ ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಎಲ್ಲಿ ನಡೆಯಲಿದೆ? ಎಷ್ಟು ಗಂಟೆಗೆ ನಡೆಯಲಿದೆ ಮತ್ತು ಇದನ್ನು ಎಲ್ಲಿ ವೀಕ್ಷಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಇಂದಿನ ವುಮನ್ ಪ್ರೀಮಿಯರ್ ಲೀಗ್​​ ಸಖತ್ ಥ್ರಿಲ್ಲಿಂಗ್ ಮ್ಯಾಚ್ ಆಗುವ ಎಲ್ಲಾ ಸಾಧ್ಯತೆ ಇದೆ. ಇಂದಿನ ಪಂದ್ಯ ರಾತ್ರಿ 7.30ಕ್ಕೆ ಆರಂಭ ಆಗಲಿದೆ. ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ವಡೋದರದ ಈ ಸ್ಟೇಡಿಯಂ ಹೈ ಸ್ಕೋರ್ ಮ್ಯಾಚ್​​ಗಳಿಗೆ ಖ್ಯಾತಿ ಪಡೆದಿದೆ. ಇದು ಬ್ಯಾಟರ್​ಗಳ ಪಿಚ್ ಆಗಿರುವುದರಿಂದ ಹೆಚ್ಚಿನ ರನ್​ಗಳನ್ನು ನಿರೀಕ್ಷಿಸಬಹುದು.

ವಡೋದರದಲ್ಲಿ ವಾತಾವರಣ ಕೂಡ ಉತ್ತಮವಾಗಿದೆ. ಇಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ಮಳೆ ಬರುವ ಸಾಧ್ಯತೆ ಜೀರೋ ಆಗಿರುವುದರಿಂದ, ಪಂದ್ಯ ನಿಲ್ಲಬಹುದು ಎಂಬ ಭಯ ಇಲ್ಲ.ಇಲ್ಲಿನ ಹವಾಮಾನ 25 ಡಿಗ್ರೀ ಸೆಲ್ಸಿಯಸ್ ಇದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!