Friday, December 9, 2022

Latest Posts

ಅಮೆರಿಕದಲ್ಲಿ ಮಹಾತ್ಮ ಗಾಂಧಿಗೆ ಮೀಸಲಾದ ಮೊದಲ ವಸ್ತು ಸಂಗ್ರಹಾಲಯ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾತ್ಮಾ ಗಾಂಧಿಯವರ ಜೀವನ ಮತ್ತು ಸಂದೇಶಗಳ ಸಾರವನ್ನು ಸಾರುವುದಕ್ಕೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಅಮೆರಿಕದ ಅಟ್ಲಾಂಟಿಕ್ ನಗರದಲ್ಲಿ ತೆರೆಯಲಾಗಿದೆ.
ಈ ವಸ್ತುಸಂಗ್ರಹಾಲಯವು ಕಲಾಕೃತಿಗಳು ಮತ್ತು ಗಾಂಧಿಯವರ ಜೀವನ ಸಂದೇಶ ಸಾರುವ ಡಿಜಿಟಲ್ ಡಿಸ್‌ ಪ್ಲೇ ಪರದೆಗಳನ್ನು ಹೊಂದಿದೆ. ಸಂದರ್ಶಕರು ಶಾಂತಿ ಧೂತ ಗಾಂಧಿಯವರ ಜೀವನದ ಮಹತ್ವದ ಘಟನಾವಳಿಗಳಿಗಳನ್ನು ನೋಡಬಹುದಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ಸದಸ್ಯರು ಮತ್ತು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಭಾಗವಹಿಸಿದ್ದರು.
ನ್ಯೂಜೆರ್ಸಿ ಮೂಲದ ಗಾಂಧಿಯನ್ ಸೊಸೈಟಿಯಿಂದ ಆದಿತ್ಯ ಬಿರ್ಲಾ ಗ್ರೂಪ್ ಸಹಭಾಗಿತ್ವದಲ್ಲಿ ಈ ಮ್ಯೂಸಿಯಂ ಅಭಿವೃದ್ಧಿಪಡಿಸಲಾಗಿದೆ. ಇದು ಅಮೆರಿಕದಲ್ಲಿ ʼರಾಷ್ಟ್ರದ ಪಿತಾಮಹʼ ಮಹಾತ್ಮ ಗಾಂಧಿಗೆ  ಸಮರ್ಪಿತವಾದ ಮೊದಲ ವಸ್ತುಸಂಗ್ರಹಾಲಯವಾಗಿದೆ.
ಈ ವಸ್ತುಸಂಗ್ರಹಾಲಯವನ್ನು ಅಮೆರಿಕದಲ್ಲಿ ನಿರ್ಮಿಸಿದ್ದಕ್ಕಾಗಿ ಬಿರ್ಲಾ ಗ್ರೂಪ್ ಅನ್ನು ಜೈಸ್ವಾಲ್ ಶ್ಲಾಘಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!